Ilkal: ೭೮ನೇ ಸ್ವಾತಂತ್ರ್ಯೋತ್ಸವ:-
ಇಲಕಲ್ಲ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಇಲಕಲ್ಲ ತಾಲೂಕ ಆಡಳಿತ ವತಿಯಿಂದ ಸಡಗರ ಸಂಭ್ರಮದಿಂದ ಆಚರಿಸಿದ ೭೮ನೇ ಸ್ವತಂತ್ರ ದಿನಾಚರಣೆ
ಬಾಗಲಕೋಟ ಜಿಲ್ಲೆ ಇಲಕಲ್ಲ ತಾಲೂಕ ಆಡಳಿತ ವತಿಯಿಂದ ಇಲಕಲ್ಲ ತಹಶೀಲ್ದಾರ್ ಕಚೇರಿ ಆವರಣದಲ್ಲಿ ೭೮ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು
ಇಂದು ನಾವೆಲ್ಲರೂ ಹೆಮ್ಮೆಪಡುವಂತಹ ಹಬ್ಬ ೭೮ ನೇ ಸ್ವಾತಂತ್ರ್ಯೋತ್ಸವ ಹಬ್ಬ ಎಂದು ಹೆಮ್ಮೆಯಿಂದ ನುಡಿಯಬೇಕು ಎಂದು ಇಳಕಲ್ ತಾಲೂಕಾ ದಂಡಾಧೀಕಾರಿ ಸತೀಶ್ ಕೂಡಲಗಿ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
೧೯೪೭ ರ ಮಧ್ಯರಾತ್ರಿ ೧೨ ಕ್ಕೆ ಬ್ರಿಟಿಷ್ ರು ಭಾರತದಿಂದ ಕಾಲ್ಕಿತ್ತರು.
ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಗುವ ಸಲುವಾಗಿ ಹಲವಾರು ಹೋರಾಟಗಾರರು ತಮ್ಮ ಪ್ರಾಣವನ್ನ ಲೆಕ್ಕಿಸದೇ ಹೋರಾಟಕ್ಕೆ ದುಮುಖಿದ
ಫಲದಿಂದಲೇ ಇವತ್ತು ನಾವೆಲ್ಲರೂ ಸ್ವಾತಂತ್ರ್ಯೋತ್ಸವ ವನ್ನು ಸಡಗರ ಸಂಭ್ರಮದಿಂದ ಆಚರಿಸುತ್ತಾ ಬಂದಿದ್ದೇವೆ ಎಂದು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಮಂಡಳಿಯ ಅಧ್ಯಕ್ಷರು ಶಾಸಕ ವಿಜಯಾನಂದ ಎಸ್.ಕಾಶಪ್ಪನವರು ತಾಲೂಕಾ ಆಡಳಿತದ ವತಿಯಿಂದ ೭೮ ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ತಾಲೂಕಾ ಅಧಿಕಾರಿಗಳು
ಈಶ್ವರ ಗಡ್ಡಿ,
ಎಂ,ಎಚ್.
ದೇಶಪಾಂಡೆ,
ಪೌರಾಯುಕ್ತ ಶ್ರೀನಿವಾಸ ಜಾದವ್,
ಹುನಗುಂದ ಸಿಪಿಐ ಸುನೀಲ ಸವದಿ,
ಶರಣಪ್ಪ ಆಮದಿಹಾಳ,
ಮಲ್ಲು ಮಡಿವಾಳರ,
ಅಬ್ಬು ಹಳ್ಳಿ,
ಯಲ್ಲಪ್ಪ ರಾಜಾಪುರ, ಹಾಗೂ ಇನ್ನಿತರ ಮುಖಂಡರು ಅಧಿಕಾರಿಗಳು, ಮತ್ತು ಮುದ್ದು ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
Tags
Independence Day