ಗೃಹಲಕ್ಷ್ಮಿ ಹಣದಲ್ಲಿ ಇಡೀ ಗ್ರಾಮಕ್ಕೆ ಹೋಳಿಗೆ ಊಟ ಹಾಕಿದ ಅಜ್ಜಿಗೆ ಸಿಎಂ ಸಿದ್ದರಾಮಯ್ಯನವರಿಂದ ಸನ್ಮಾನ ಗೃಹಲಕ್ಷ್ಮಿ ಹಣದಲ್ಲಿ ಇಡೀ ಗ್ರಾಮಕ್ಕೆ ಹೋಳಿಗೆ ಊಟ ಹಾಕಿದ ಬೆಳಗಾವಿ ಜಿಲ್ಲೆಯ ರಾಯಬಾಗ್ ತಾಲ್ಲೂಕಿನ ಸುಟ್ಟಟ್ಟಿ ಗ್ರಾಮದ ಅಕ್ಕಾತಾಯಿ ಲಂಗೋಟಿಯವರನ್ನು ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸನ್ಮಾನಿಸಿ, ನಿಮ್ಮ ಆಶೀರ್ವಾದ ಹೀಗೆಯೇ ಇರಲಿ ಎಂದು ಆಶಿಸಿ, ನಮ್ಮ ಸರ್ಕಾರ ಇರುವವರೆಗೂ ಗೃಹಲಕ್ಷ್ಮಿ ಯೋಜನೆ ನಿಲ್ಲಲ್ಲ, ಪ್ರತೀ ತಿಂಗಳು ನಿಮಗೆ ಬಂದು ತಲುಪುತ್ತದೆ ತಲುಪುತ್ತದೆ ಎಂದು ಹೇಳಿದರು
ಇದೆ ಸಂದರ್ಭದಲ್ಲಿ ಮಾತನಾಡಿದ ಅಜ್ಜಿ ನಾಡಿಗೆ ಅನ್ನ ಕೊಡೋ ದೊರೆ ನಿನ್ನ ಕೈ ಮೇಲಾಗ್ಲಿ ನಾಡು ಆಳುವ ದೊರೆ ನೀನು ದೇಶ ಆಳ್ಬೇಕು ಎಂದು ಅಕ್ಕಾತಾಯಿ ಲಂಗೂಟಿಯವರು ಮನಸ್ಪೂರ್ತಿಯಾಗಿ ಆಶೀರ್ವಾದ ಮಾಡಿದರು. ಈ ಸಂದರ್ಭದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಅಕ್ಕಾತಾಯಿ ಲಂಗೂಟಿಯವರಿಗೆ ಮತ್ತು ಅವರ ಜೊತೆಯಿದ್ದ ತಾಯಂದಿರಿಗೆ ಸೀರೆ, ಅರಸಿನ, ಕುಂಕುಮ, ಬಾಗಿನ ನೀಡಿದರು.