ilkal : ಮಠದಿಂದ ಘಟ ಬೆಳೆಯಬಾರದು ಘಟದಿಂದ ಮಠ ಬೆಳೆಯಬೇಕು

News : ಕಂದಗಲ್ಲ :ಮಠದಿಂದ ಘಟ ಬೆಳೆಯಬಾರದು ಘಟದಿಂದ ಮಠ ಬೆಳೆಯಬೇಕು ಇದು ಹಾನಗಲ್ಲ ಕುಮಾರೇಶ್ವರ ಶ್ರಿವಾಣಿ, ಕಟ್ಟಿದ ಮಠದಲ್ಲಿ, ಒಟ್ಟಿದ ಸಿರಿಯಲ್ಲಿ ಹೊಟ್ಟೆ ಬೆಳೆಸಿಕೊಂಡ ಶ್ರೀಗಳಂತಲ್ಲ ನಮ್ಮ ಕನಕಗಿರಿ - ಕಂದಗಲ್ಲದ ಡಾ ಚನ್ನಮಲ್ಲ ಸ್ವಾಮಿಗಳು ಶಿಥಿಲವಾಗಿದ್ದ ಮಠವನ್ನು ಭಕ್ತರ ದೇಣಿಗೆಯಿಂದ ಹೊಸದಾಗಿ ಬ್ರಹತ್ ಮಠವನ್ನು ಕಟ್ಟಿ ಸ್ವಾಮಿಗಳು ಸೊರಗಿದ್ದಾರೆ, ಸ್ವಾಮಿ ಉಬ್ಬಿದರೆ ಮಠ ಸೊರಗುತ್ತದೆ ಸ್ವಾಮಿ ಸೊರಗಿದರೆ ಮಠ ಉಬ್ಬುತ್ತದೆ ಅಂದರೆ ಬೆಳೆಯುತ್ತದೆ, ಶ್ರೀಗಳ ಶ್ರಮ ಭಕ್ತರ ದೇಣಿಗೆಯಿಂದ ತೆಲೆ ಎತ್ತಿ ನಿಂತಿರುವ ಸದ್ಭಕ್ತ ಸದನ ಇದಕ್ಕೆ ಸಾಕ್ಷಿ ಎಂದು ಮುಂಡರಗಿ ಜಗದ್ಗುರು ನಾಡೋಜ ಶ್ರೀ ಅನ್ನದಾನ ಮಹಾಸ್ವಾಮಿಗಳು ಹೇಳಿದರು.
ಕಂದಗಲ್ಲ ಗ್ರಾಮದ ಮುಖ್ಯ ಬಜಾರಕ್ಕೆ ಹೊಂದಿಕೊಂಡಿರುವ ಶಿಥಿಲಗೊಂಡು ಹಳೆಯದಾದ ರುದ್ರುಸ್ವಾಮಿ ಮಠವನ್ನು ಲಕ್ಷಾಂತರ ರೂ ಗಳ ಭಕ್ತರ ದೇಣಿಗೆಯಿಂದ ನಿರ್ಮಿಸಿದ ಸದ್ಭಕ್ತ ಸದನವನ್ನು ಶ್ರೀಗಳು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಕನಕಗಿರಿ ಡಾ ಚನ್ನಮಲ್ಲ ಸ್ವಾಮಿಗಳು ಚಿಕ್ಕವರು ಆದರೆ ಇವರು ಮಾಡುತ್ತಿರುವ ಕಾರ್ಯಗಳು ದೊಡ್ಡವು ಇವರು ಮಠದ ಅಭಿವೃದ್ಧಿಗಾಗಿ ಭಕ್ತರ ಕಲ್ಯಾಣಕ್ಕಾಗಿ ಧಾರ್ಮಿಕ ಕಾರ್ಯಗಳನ್ನು ಸದಾ ಮಾಡುತ್ತಿರುವ ಚನ್ನಮಲ್ಲ ಶ್ರೀಗಳೆಂದರೆ ನಮಗೆ ಬಹಳ ಪ್ರೀತಿ ಇವರು ಕಟ್ಟಿಸಿದ ಕನಕಗಿರಿ ಮಠ ಬ್ರಹನ ಮಠವಾಗಿದೆ ಮೆದಿಕಿನಾಳ ಮಠ ಭಕ್ತರ ಶ್ರದ್ದಾಕೇಂದ್ರ ಅದರಂತೆ ಕಂದಗಲ್ಲ ಮಠ ಮಹಾ ಮಠವಾಗಿ ಬೆಳೆಯಲಿ ಎಂದು ಹಾರೈಸಿದರು.
ನಂದವಾಡಗಿ ಮಹಾಂತೇಶ್ವರ್ ಮಠದ ಹಿರಿಯ ಶ್ರೀಗಳಾದ ಡಾ ಮಹಾಂತಲಿಂಗ ಶಿವಾಚಾರ್ಯರು ಮಾತನಾಡಿ ಸಮಾಜದಲ್ಲಿ ಶಾಂತಿ ನೆಮ್ಮದಿ ಸೌಹಾರ್ದತೆ ಭಾವೈಕ್ಯತೆ ಬೆಳೆಸುವಲ್ಲಿ ಮತ್ತು ನಾಡೀನೆಲ್ಲೆಡೆ ಧಾರ್ಮಿಕ ಸಂಸ್ಥೆಗಳನ್ನು ಕಟ್ಟುವ ಮೂಲಕ ಮಠಗಳು ತಮ್ಮದೇ ಆದ ವಿಶೇಷ ಕೊಡುಗೆ ನೀಡುತ್ತವೆ ಆ ಸಾಲಿನಲ್ಲಿ ಕನಕಗಿರಿ - ಕಂದಗಲ್ಲ - ಸುವರ್ಣಗಿರಿ ರುದ್ರುಸ್ವಾಮಿ ಮಠವು ಸಮಾಜಮುಖಿ ಸೇವೆ ಮಾಡುವ ಮೂಲಕ ಜನರ ಮನಸ್ಸು ಕಟ್ಟುವ ಕೆಲಸ ಮಾಡುತ್ತಿದೆ ಆ ದಿಸೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ರುದ್ರುಸ್ವಾಮಿ ಮಠದ ಸದ್ಭಕ್ತ ಸದನದಲ್ಲಿ ಸದಾಕಾಲ ಧಾರ್ಮಿಕ ಕಾರ್ಯಕ್ರಮಗಳು ನೆಡೆಯುವಂತಗಲಿ ಚನ್ನಮಲ್ಲ ಶ್ರೀಗಳ ಮಾರ್ಗದರ್ಶನದಲ್ಲಿ ಸದ್ಭಾವನೆ ಸದ್ಗುಣ ಬೆಳೆಸಿ ಮನುಷ್ಯ ಜೀವನ ಸಾರ್ಥಕ ಪಡಿಸಿಕೊಳ್ಳಿರಿ ಎಂದ ಶ್ರೀಗಳು ಡಾ ಚನ್ನಮಲ್ಲ ಶ್ರೀಗಳು ಭಕ್ತರಿಂದ ದೇಣಿಗೆ ಸಂಗ್ರಹಿಸಿ ಇಂತಹ ಭವ್ಯವಾದ ಸದ್ಭಕ್ತ ಸದನ ನಿರ್ಮಿಸಿ ಭಕ್ತರಿಗೆ ಸಮರ್ಪಸಿರುವದು ಶ್ರೀಗಳ ಕಾರ್ಯ ಶ್ಲಾಘನಿಯ ಎಂದು ಹೇಳಿದರು
ಗಡಿಗೌಡಗಾoವ ಮಠದ ಡಾ ಶಾಂತವೀರ ಶಿವಾಚಾರ್ಯರು ಕಂದಗಲ್ಲ ರುದ್ರುಸ್ವಾಮಿಮಠದ ಡಾ ಚನ್ನಮಲ್ಲ ಶ್ರೀಗಳು, ಆಶೀರ್ವಚನ ನೀಡಿದರು ಗ್ರಾಮದ ಹಿರಿಯರು ಭಕ್ತರು
ಉಪಸ್ಥಿತರಿದ್ದರು

ವಿಶೇಷ ವರದಿ -ವೀರೇಶ ಚ ಶಿಂಪಿ ಕಂದಗಲ್ಲ

Post a Comment

Previous Post Next Post

Contact Form