Ilkal :ಶ್ರೀ ಕೃಷ್ಣ ಜನ್ಮಾಷ್ಟಮಿಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಇಲಕಲ್ಲ ನಗರಸಭೆ ಅಧ್ಯಕ್ಷರು ಶ್ರೀಮತಿ ಸುಧಾರಾಣಿ ಮುರುಗೇಶ್ ಸಂಗಮ ಮತ್ತು ಉಪಾಧ್ಯಕ್ಷರಾದ ಶ್ರೀಮತಿ ಕಾಳಮ್ಮ ವಿರೂಪಾಕ್ಷಪ್ಪ ಜಕ್ಕಾ
ಇಲಕಲ್ಲ ನಗರದ ನಿಸರ್ಗ ಸಾಂಸ್ಕೃತಿಕ ಮತ್ತು ಶಿಕ್ಷಣ ಸಂಸ್ಥೆಯ ಆಕ್ಟಿವ್ ಕಿಡ್ಸ್ ಶಾಲೆಯಲ್ಲಿ ಆಗಸ್ಟ್ 23 ರಂದು ಶ್ರೀ ಕೃಷ್ಣ ಜನ್ಮಾಷ್ಟಮಿಯ ಕಾರ್ಯಕ್ರಮಕ್ಕೆ ಇಲಕಲ್ಲ ನಗರಸಭೆ ಅಧ್ಯಕ್ಷರಾದ ಶ್ರೀಮತಿ ಸುಧಾರಾಣಿ ಮುರುಗೇಶ್ ಸಂಗಮ್ ಮತ್ತು ಉಪಾಧ್ಯಕ್ಷರಾದ ಶ್ರೀಮತಿ ಕಾಳಮ್ಮ ವಿರುಪಾಕ್ಷಪ್ಪ ಜಕ್ಕಾ ಅವರು ಚಾಲನೆ ನೀಡಿದರು, ಚಾಲನೆ ನೀಡಿದ ನಂತರ ಮುದ್ದು ಮಕ್ಕಳಿಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯ ಕೋರಿದರು,
ಇದೇ ಸಂದರ್ಭದಲ್ಲಿ ಅಧ್ಯಕ್ಷರಿಗೆ ಮತ್ತು ಉಪಾಧ್ಯಕ್ಷರಿಗೆ ಶಾಲೆಯ ಆಡಳಿತ ವರ್ಗದಿಂದ ಸನ್ಮಾನಿಸಿ ಸತ್ಕಾರಿಸಿದರು
ಈ ಸಂದರ್ಭದಲ್ಲಿ ಶ್ರೀ ಮಾರ್ಕಂಡೇಶ್ವರ ಶಿವಶಕ್ತಿ ಮಹಿಳಾ ಸಂಘದ ಸದಸ್ಯರಾದ ಶ್ರೀಮತಿ ರತ್ನಬಾಯಿ ಆಂಜನಪ್ಪ ಜಕ್ಕಾ, ಶ್ರೀಮತಿ ಮಧು ಪೋತ, ಶ್ರೀಮತಿ ಕುಪ್ಪಮ್ಮ ವೆಂಕಟೇಶ್ ಸಂಗಾ, ಶ್ರೀಮತಿ ಕವಿತಾ ಚುಂಚಾ, ಶ್ರೀಮತಿ ಸರಸ್ವತಿ ನಾಗಪ್ಪ ನೀಲಿ ಮತ್ತು ಶಾಲೆಯ ಮುಖ್ಯ ಗುರುಗಳಾದ ಶ್ರೀಯುತ ಮೇಘರಾಜ್ ನೀಲಿ, ಶಿಕ್ಷಕರಾದ ಶ್ರೀಮತಿ ಸವಿತಾ ಎಸ್ ನೀಲಿ ಸಂಗೀತ, ಅಂಜು ದೀಪ, ಮಂಜುಳಾ ಉಮಾ ಹಾಗೂ ಸಂಘದ ಅಧ್ಯಕ್ಷರಾದ ಶರಣು ನಾಗಪ್ಪ ನೀಲಿ, ಸದಸ್ಯರಾದ ಮಂಜುನಾಥ್ ಎನ್ ನೀಲಿ, ಮುದ್ದು ಮಕ್ಕಳು ಹಾಗೂ ಪಾಲಕರು ಉಪಸ್ಥಿತರಿದ್ದರು
Tags
News