ವಿ.ಸಿ. ಅಕ್ಕಿ ಸ್ಮಾರಕ ಸಂಘ ಹಾಗೂ ಜೆಸಿಐ ಮಹಾಂತಶ್ರೀ ಸಿಟಿ, ಇಲಕಲ್ಲ ವತಿಯಿಂದ ವಿಶಿಷ್ಟವಾಗಿ ನಡೆದ ರಕ್ತ ತಪಷಣೆ ಶಿಬಿರ
ಬಾಗಲಕೋಟ ಜಿಲ್ಲೆ ಇಲಕಲ್ಲ ವಿ.ಸಿ. ಅಕ್ಕಿ ಸ್ಮಾರಕ ಸಂಘ ಹಾಗೂ ಜೆಸಿಐ ಮಹಾಂತಶ್ರೀ ಸಿಟಿ, ಇಲಕಲ್ಲ ವಿ.ಸಿ. ಅಕ್ಕಿ ಕಾಲೇಜ್ ಆಫ್ ಪ್ಯಾರಾಮೆಡಿಕಲ್ ಸಾಯನ್ಸ್ (DMLTC & DHI) ಹಾಲಮ್ಮ ಸ್ಕೂಲ್ ಆಫ್ ನರ್ಸಿಂಗ್ (GNM) ವತಿಯಿಂದ ಆಗಸ್ಟ್ 27 ರಂದು ಕುಲಕರ್ಣಿ ಪೇಟೆಯ ಜೆಸಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಆರೋಗ್ಯ ಮತ್ತು ರಕ್ತ ತಪಾಸಣಾ ಶಿಬಿರ ಕಾರ್ಯಕ್ರಮ ಜರುಗಿತು
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಅಶೋಕ್ ಶಾವಿ, ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅವಿನಾಶ್ ಕೆ ಅಕ್ಕಿ, ಹಾಗೂ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀಮತಿ ಆದಿತಿ ಅಕ್ಕಿ, ಶಿವಣ್ಣ ಅಕ್ಕಿ, ಹನಮಂತ ಚುಚಾ, ಮತ್ತು ವೇದಿಕೆ ಮೇಲಿದ್ದ ಗಣ್ಯಮಾನ್ಯರು ಸೇರಿ ಶಶಿಗೆ ನೀರು ಎರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು,
ನಂತರ ಶಾಲೆಯ ವಿದ್ಯಾರ್ಥಿಗಳಿಗೆ ಮತ್ತು ಬಂದಂತಹ ಸಾರ್ವಜನಿಕರಿಗೆ ಆರೋಗ್ಯ ಮತ್ತು ರಕ್ತ ತಪಷಣೆ ಮಾಡಿದ ನಂತರ ಶಾಲೆಯ ಮುದ್ದು ಮಕ್ಕಳಿಗೆ ನೋಟ್ ಬುಕ್ ವಿತರಣೆ ಮಾಡುವ ಮುಖಾಂತರ ವಿಶಿಷ್ಟವಾಗಿ ಕಾರ್ಯಕ್ರಮ ನೆರವೇರಿಸಿದರು