Ilkal : ಇಲಕಲ್ಲ ನಗರಸಭೆಗೆ ಲಭಿಸಿದ ರಾಜ್ಯಮಟ್ಟದ ಪ್ರಶಸ್ತಿ: ಪ್ರಶಸ್ತಿ ಸ್ವೀಕರಿಸಿದ ಪೌರಾಯುಕ್ತ ಶ್ರೀನಿವಾಸ ಜಾದವ್

 

ಇಲಕಲ್ಲ ನಗರಸಭೆಗೆ ಲಭಿಸಿದ ರಾಜ್ಯಮಟ್ಟದ ಪ್ರಶಸ್ತಿ: ಪ್ರಶಸ್ತಿ ಸ್ವೀಕರಿಸಿದ ಪೌರಾಯುಕ್ತ ಶ್ರೀನಿವಾಸ ಜಾದವ್


ಬಾಗಲಕೋಟ ಜಿಲ್ಲೆಯ ಇಳಕಲ್:ನಗರಸಭೆ ಪಿಎಂ ಸ್ವನಿಧಿ ಯೋಜನೆಯಡಿ ಉತ್ತಮ ಅನುಷ್ಠಾನಗೊಳಿಸಿರುವ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮುಂಚೂಣಿ ನಗರಸಭೆ ಎಂದು ಕರೆಯಲಾಗಿದೆ.ಈ ರಾಜ್ಯಮಟ್ಟದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ದಿನಾಂಕ 22/8/2024 ರಂದು ಕರ್ನಾಟಕ ಸರ್ಕಾರದ ವೈದ್ಯಕೀಯ ಹಾಗೂ ಜೀವನೋಪಾಯ ಇಲಾಖೆಯ ಸಚಿವರಾದ ಶರಣಪ್ರಕಾಶ್ ಪಾಟೀಲ್ ಅವರು ವಿಧಾನಸೌದ ಪಕ್ಕದಲ್ಲಿ ಇರುವ ವಿಕಾಸ ಸೌದದಲ್ಲಿ ನಡೆದ ಭವ್ಯಕಾರ್ಯಕ್ರಮ ದಲ್ಲಿ ಇಳಕಲ್ಲ ನಗರಸಭೆಯ ಪೌರಾಯುಕ್ತರಾದ ಶ್ರೀನಿವಾಸ್ ಜಾಧವ್ ನಗರಸಭೆಯ ಡಿ ನಲ್ಕ್ ವಿಭಾಗದ ಅಧಿಕಾರಿ ಬಡೇಸಾಬ್ ಹುಲಿಕೇರಿ ಅವರಿಗೆ ಸಚಿವರು ಇಲಾಖೆ ಅಧಿಕಾರಿಗಳು ಪ್ರಶಸ್ತಿ ನೀಡಿ ಗೌರವಿಸಿ ಇದೇ ರೀತಿಯೂ ಮುಂದಿನ ದಿನಗಳಲ್ಲಿಯೂ ಪ್ರಶಸ್ತಿ ಪಡೆಯುವಂತಗಾಲಿ ಎಂದು ಇಳಕಲ್ಲ ನಗರಸಭೆ ಪೌರಾಯುಕ್ತರಿಗೆ ಸಚಿವರು ಹೇಳಿ ಗೌರವಿಸಿದರು .



ಈ ಪ್ರಶಸ್ತಿ ಪಡೆದ ಸುದ್ದಿ ತಿಳಿದ ನಗರಸಭೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸುಧಾರಾಣಿ ಸಂಗಮ ಹಾಗೂ ನೂತನ ಉಪಾಧ್ಯಕ್ಷರಾದ ಕಾಳಮ್ಮ ಜಕ್ಕಾ ಅವರು ಇಳಕಲ್ಲ ಜನತೆ ಪರವಾಗಿ ಪೌರಾಯುಕ್ತರಿಗೆ ಅಭಿನಂದನೆಯನ್ನು ತಿಳಿಸಿದ್ದಾರೆ. 


ನಗರದ ಬೀದಿಬದಿ ವ್ಯಾಪಾರಸ್ಥ ಸಂಘದ ಅಧ್ಯಕ್ಷರಾದ ಪವಾಡೆಪ್ಪ ಚಲವಾದಿ ಸಂಘಟನೆ ಪರವಾಗಿ ಪೌರಾಯುಕ್ತರಿಗೆ ಹಾಗೂ ಡಿ ನಲ್ಡ್ ವಿಭಾಗದ ಅಧಿಕಾರಿಗಳಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.

Post a Comment

Previous Post Next Post

Contact Form