MLA :- ಅಭಿಮಾನಿಗಳೇ ನನ್ನ ದೇವರು ಎಂದ :- ಶಾಸಕ ವಿಜಯಾನಂದ್ ಎಸ್ ಕಾಶಪ್ಪನವರ
ಸಿಎಂ ಸಿದ್ದರಾಮಯ್ಯನವರು ಮೂಡ ಹಗರಣದಲ್ಲಿ ಸಿಲುಕಿದ್ದಾರೆ ಎಂದು ಆರೋಪ ಮಾಡುತ್ತಿರುವ ಬಿಜೆಪಿ ಮತ್ತು ಜೆಡಿಎಸ್ ನಾಯಕರು ನಮ್ಮ ಸಿಎಂ ಸಿದ್ದರಾಮಯ್ಯ ಅವರು ಯಾವುದೇ ಪ್ರಕರಣದ ಹಗರಣದಲ್ಲಿ ಸಿಲುಕಿಲ್ಲ ಅವರ ವಿರುದ್ಧ ಷಡ್ಯಂತರ ಮಾಡುತ್ತಿದ್ದಾರೆ ಎಂದು ಹುನಗುಂದ ಮತಕ್ಷೇತ್ರದ ಶಾಸಕ ಕಾಶಪ್ಪನವರ್ ಅವರ ಅಭಿಮಾನಿಗಳು ಸಿಎಂ ಸಿದ್ದರಾಮಯ್ಯನವರು ಈ ಮೂಡ ಪ್ರಕರಣದಲ್ಲಿ ದೋಷ ಮುಕ್ತರಾಗಲಿ ಎಂದು ಇಂದು ಇಲಕಲ್ಲ ನಗರದಿಂದ ಬಾದಾಮಿ ಬನಶಂಕರಿ ದೇವಸ್ಥಾನಕ್ಕೆ ಪಾದಯಾತ್ರೆ ಮುಖಾಂತರ ತೆರಳಿ ತಾಯಿ ಬನಶಂಕರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲು ಮುಂದಾಗಿದ್ದಾರೆ ಅಭಿಮಾನಿಗಳು ಹೋಗುವ ಸಂದರ್ಭದಲ್ಲಿ
ಶಾಸಕ ವಿಜಯಾನಂದ್ ಎಸ್ ಕಾಶಪ್ಪನವರ ಅವರು ಪಾದಯಾತ್ರೆಗೆ ಹೊರಟಂತ ಅಭಿಮಾನಿಗಳ ಕಡೆಗೆ ತೆರಳಿ ಅಭಿಮಾನಿಗಳಿಗೆ ಅಲ್ಪ ಉಪಹಾರ ಸೇವಿಸಿಸಿ ಅವರಿಗೆ ಗೌರವದಿಂದ ಸತ್ಕರಿಸಿ ನಿಮ್ಮೆಲ್ಲರಿಗೂ ಒಳ್ಳೆಯದಾಗಲೆಂದು ಶುಭ ಹಾರೈಸಿದರು
ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕ ವಿಜಯಾನಂದ್ ಕಾಶಪ್ಪನವರ್ ಅವರು ನಮ್ಮ ಸಿದ್ದರಾಮಯ್ಯನವರು ಒಂದು ದೊಡ್ಡ ಶಕ್ತಿ ಅವರನ್ನು ಈ ಪ್ರಕರಣದಲ್ಲಿ ಸುಖ ಸುಮ್ಮನಿ ಸಿಲಿಕಿಸಿ ಹಾಕಲು ಬಿಜೆಪಿ ಮತ್ತು ಜೆಡಿಎಸ್ ನಾಯಕರು ಉನ್ನಾರ ಮಾಡುತ್ತಿದ್ದಾರೆ ಅವರು ಯಾವುದೇ ಪ್ರಕರಣದಲ್ಲಿ ಬಾಗಿ ಆಗಿಲ್ಲ ಅವರನ್ನು ಏನು ಮಾಡೋಕೆ ಆಗಲ್ಲ ನಾವು ಮತ್ತು ಅವರ ಅಭಿಮಾನಿಗಳು ಮೂಲೆ ಮೂಲೆಯಲ್ಲಿ ಅವರ ಅಭಿಮಾನಿಗಳು ಇದ್ದಾರೆ
ಅದರಂತೆ ನನ್ನ ಕ್ಷೇತ್ರದಲ್ಲಿ ಕಾಶಪ್ಪನವರ್ ಕುಟುಂಬದ ಅಭಿಮಾನಿಗಳು ನಮ್ಮ ಸಿಎಂ ಸಿದ್ದರಾಮಯ್ಯನವರು ಈ ಎಲ್ಲಾ ಪ್ರಕರಣದಲ್ಲಿ ದೋಷ ಮುಕ್ತರಾಗಲಿ ಎಂದು ಇಂದು ಬೆಳಿಗ್ಗೆ 5:00ಗೆ ಪಾದಯಾತ್ರೆ ಮುಖಾಂತರ ಬಾದಾಮಿ ಬನಶಂಕರಿ ದೇವಸ್ಥಾನಕ್ಕೆ ತೆರಳಿ ನಾಳೆ ದಿ. 19/8/2024 ರಂದು ಬನಶಂಕರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲು ಮುಂದಾಗಿದ್ದಾರೆ ಅದರಂತೆ ತಾಯಿ ಬನಶಂಕರಿ ದೇವಿ ಅವರೆಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದು ಹಾರೈಸಿದರು
ಅದರಂತೆ ನಮ್ಮ ಸಿದ್ದರಾಮಯ್ಯನವರನ್ನು ಯಾರು ಮುಟ್ಟೋಕು ಆಗಲ್ಲ ಅವರ ಜೊತೆಗೆ ನಾವೆಲ್ಲ ಇರೋವರೆಗೂ ಅವರನ್ನು ಏನು ಮಾಡೋಕೆ ಆಗಲ್ಲ ಮುಟ್ಟೂಕು ಆಗಲ್ಲ ಎಂದು ಹುನಗುಂದ ಇಲಕಲ್ಲ ಮತಕ್ಷೇತ್ರದ ಶಾಸಕ ವಿಜಯಾನಂದ್ ಎಸ್ ಕಾಶಪ್ಪನವರ ಅವರು ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದರು
ಅದರಂತೆ ಅಭಿಮಾನಿಗಳೇ ನಮ್ಮನೆ ದೇವರು ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ಉರ್ದುಂಬಿಸಿ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಿದ್ದಾರೆಈ ಸಂದರ್ಭದಲ್ಲಿ ಮುಖಂಡರಾದ ವಿಜಯ ಮಹಾಂತೇಶ ಗದ್ದನಕೇರಿ,ಎಂ ಡಿ ಭಗವಾನ್, ಮಾಂತೇಶ ಆರ್ತಿ,ಹಬ್ಬು ಹಳ್ಳಿ, ಅಮೀರ ಇಟಗಿ, ರಾಜು ಇಲಕಲ್ಲ, ಮಹಾಂತೇಶ್ ಹಿರೇಮಠ, ಪವನ್ ಸದ್ದಾಂ ಹುಸೇನ್ ಇಲಕಲ್ಲ,ಉಸ್ತಾದ್ ಇಲಾಳ,ಅಬ್ದುಲ್ ರಜಾಕ ಹುಣಚಗಿ,ಅವೀನಾಶ
ಅಕ್ಕಿ,ಮಹಾಂತೇಶ ಅಕ್ಕಿ,ಪ್ರವೀಣ ಕೃಷ್ಣಾಪುರ,ಶಾನವಾಜ್ ಕಂದಗಲ್, ವಿಜಯಕುಮಾರ ಜಾನಕಿ,ರಾಘವೇಂದ್ರ ಸಿನೂರ,ಬಸವರಾಜ ವಜ್ರದ,ಮಂಜುನಾಥ ಬೆಳಗಲ್,ಶ್ರೀಧರ ಚಿತ್ತಾಪುರ,ರಾಘು ಜೋಗಿನ,ಲಕ್ಷ್ಮಣ ಮಲರಖಾನ,ರವಿ ರಗಟಿ,ರಾಘವೇಂದ್ರ ಪೂಜಾರಿ,ಪರಶುರಾಮ ಸರೋದೆ,ಶಕ್ತಿ ಇಂದರಗಿ,ಮಹಾಂತೇಶ ನಾಗಲಿಕ್,ಬಸವರಾಜ ರಗಟೆ,ಸಂತೋಷ ಅಲ್ಲಾ ಕಾಸಿನಾಥ ಕುಂಬಾರ,ಪವನ ಬೋಗಾರ,ಮುತ್ತು ಪತ್ತಾರ,ರಾಮಲಿಂಗ್ ಹೆಬ್ಬಾಳ, ವಿರೇಶ ಕುಂಬಾರ, ಗಣೇಶ ಜನಿವಾರ, ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಇದ್ದರು ಹಾಗೂ ಕಾಶಪ್ಪನವರ್ ಅಭಿಮಾನಿ ಬಳಗದ ಸದಸ್ಯರು ಉಪಸ್ಥಿತರಿದ್ದರು
Tags
breaking news ILKAL