MLA : ಕಾಶಪ್ಪನವರ್ ಗೇಮ್ ಪ್ಲಾನ್ ಗೆ ಬಿಜೆಪಿಗೆ ದಕ್ಕದ ಇಲಕಲ್ಲ ನಗರಸಭೆ ಅಧ್ಯಕ್ಷಗಿರಿ

Ilkal : ಕಾಶಪ್ಪನವರ್ ಗೇಮ್ ಪ್ಲಾನ್ ಗೆ ಬಿಜೆಪಿಗೆ ದಕ್ಕದ ಇಲಕಲ್ಲ ನಗರಸಭೆ ಅಧ್ಯಕ್ಷಗಿರಿ

https://youtu.be/f4ZmCBfl4Nc?si=WVuLLwNocKboKKJV

ಬಾಗಲಕೋಟ ಜಿಲ್ಲೆಯ ಇಲಕಲ್ಲ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷಕ್ಕೆ ನಡೆದ ಚುನಾವಣೆಗೆ ಆಗಸ್ಟ್ 20ರಂದು ತೆರೆ ಬಿದ್ದಿದೆ,
ಶಾಸಕ ಕಾಶಪ್ಪನವರ್ ಮಾಡಿದ ಪಕ್ಕ ಪ್ಲಾನಿಗೆ ಬಿಜೆಪಿಗೆ ತೀವ್ರ ಮುಖಭಂಗ.

ಹೌದು ಇಲಕಲ್ಲ ಬಿಜೆಪಿಯಿಂದ ಗೆದ್ದ ನಗರಸಭೆ ಸದಸ್ಯರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸುವ ಮೂಲಕ ಶಾಸಕ ಕಾಶಪ್ಪನವರ ಹೆಣದ ಬಲೆಗೆ ಬಿಜೆಪಿ ತನ್ನ ಅಧಿಕಾರದಲ್ಲಿದ್ದ ಇಲಕಲ್ಲ ನಗರಸಭೆ ಗದ್ದುಗೆ ಕಳೆದುಕೊಂಡಿದೆ ಇದರಿಂದಾಗಿ ಕಾಂಗ್ರೆಸ್ ಪಕ್ಷ ಮತ್ತೆ ಚುಕ್ಕಾಣಿ ಹಿಡಿಯುವ ಮೂಲಕ ಕಾಂಗ್ರೆಸ್ ಪಾಳಿಯದಲ್ಲಿ ಸಂಭ್ರಮ ಉಂಟುಮಾಡಿದೆ 
ಇಲಕಲ್ಲ, ಅಗಸ್ಟ್ 20: ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಇಲಕಲ್ಲ ನಗರಸಭೆಗೆ ನೂತನ ಅಧ್ಯಕ್ಷರಾಗಿ ಶ್ರೀಮತಿ ಸುಧಾರಾಣಿ ಸಂಗಮ್, ಮತ್ತು ಉಪಾಧ್ಯಕ್ಷರಾಗಿ ಕಾಳಮ್ಮ ಜಕ್ಕಾ ಅವರು ಆಯ್ಕೆಯಾಗಿದ್ದಾರೆ,
ಇದರಂದಾಗಿ ಶಾಸಕ ವಿಜಯಾನಂದ್ ಕಾಶಪ್ಪನವರು ಮಾಡಿದ ಪಕ್ಕಾ ಪ್ಲಾನ್ ಗೆ ಇಲಕಲ್ಲ ನಗರಸಭೆ ಕಾಂಗ್ರೆಸ್ ಮಡಿಲಿಗೆ ಸೇರಿದೆ 

ಈ ಹಿಂದೆ ಬಿಜೆಪಿ ಆಡಳಿತದಲ್ಲಿದ್ದ ಇಲಕಲ್ಲ ನಗರಸಭೆ ಇಂದು ಶಾಸಕ ಕಾಶಪ್ಪನವರ ತಮ್ಮ ಮಡಿಲಿಗೆ ಹಾಕಿಕೊಳ್ಳುವ ಮೂಲಕ ತಮ್ಮ ಜಯದ ಪತಾಕೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ 
ಚುನಾವಣೆ ಅಧಿಕಾರಿಗಳು ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಘೋಷಣೆ ಮಾಡಿದ ಕೂಡಲೇ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಕಾಶಪ್ಪನವರ ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿತಿನಿಸಿ ಪರಸ್ಪರ ಬಣ್ಣ ಹಚ್ಚುವ ಮೂಲಕ ಸಂಭ್ರಮ ಪಟ್ಟರು
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು

Post a Comment

Previous Post Next Post

Contact Form