ಮೌನಾನುಷ್ಠಾನ ಮಂಗಲ ಎಲ್ಲರೂ ಬನ್ನಿ ಎಲ್ಲರನ್ನೂ ಕರೆತನ್ನಿ
ಇಲಕಲ್ಲ ಸಮೀಪದ ಗೊರಬಾಳ ಗ್ರಾಮದ ರಾಷ್ಟ್ರೀಯ ಹೆದ್ದಾರಿ 50ಕ್ಕೆ ಹೊಂದಿಕೊಂಡಿರುವ ಸಾದೂರ ತೋಟದಲ್ಲಿ ಮೌನಾನುಷ್ಠಾನ ಮಂಗಲ ಕಾರ್ಯಕ್ರಮ ಅದ್ದೂರಿಯಾಗಿ ಜರುಗುತ್ತಿದ್ದು ಇಳಕಲ್ ನಗರ ಗೋರಬಾಳ ಗ್ರಾಮದ ಸುತ್ತಮುತ್ತಲಿನ ಸಾರ್ವಜನಿಕರು ಮೌನಾನುಷ್ಠಾನ ಮಂಗಲ ಕಾರ್ಯಕ್ರಮಕ್ಕೆ ಬಂದು ಭಾಗಿಯಾಗಿ ಅಮ್ಮನವರ ಆಶೀರ್ವಾದ ಪಡೆಯಬೇಕು ಎಂದು ಅರವಿಂದಗೌಡ ಗೌಡರ ರವರು ತಿಳಿಸಿದರು. ಇನ್ನೋರ್ವ ಹಿರಿಯರು ಅಕ್ಯಪ್ಪ ಗೌಡ ಗೌಡರ ಮಾತನಾಡಿ. ಶಿವಯೋಗಿನಿ ಅಕ್ಕಮಹಾದೇವಿ ಅಮ್ಮನವರು ಲೋಕಕಲ್ಯಾಣಾರ್ಥವಾಗಿ ಮತ್ತು ರೈತರಿಗೆ ಮಳೆ ಬೆಳೆ ಚೆನ್ನಾಗಿ ಬರಲಿ ಎಂದು ಸತತ ಇಪ್ಪತ್ತೊಂದು ದಿನಗಳ ಕಾಲ ಅಮ್ಮನವರು ಮೌನವಾಗಿದ್ದು ಇದೇ ಸೋಮವಾರ ಕೊನೆಗೊಳ್ಳುತ್ತಿದ್ದು ಎಲ್ಲರೂ ಬಂದು ಅಮ್ಮನವರ ಆಶೀರ್ವಾದ ಪಡೆಯಬೇಕು ಎಂದು ಹೇಳಿದರು ಹಿರಿಯರಾದ ಶಿವಪುತ್ರಪ್ಪ ಕತ್ತಿ ಮಾತನಾಡಿ ಅಮ್ಮನವರು ಕಳೆದೊಂದು ದಶಕದಲ್ಲಿ ಮೂರನೆಯ ಬಾರಿ ಈ ಸ್ಥಳದಲ್ಲಿ ಮೌನ ಅನುಷ್ಠಾನ ಕೈಗೊಂಡಿದ್ದು ನಮ್ಮೆಲ್ಲರ ಭಾಗ್ಯ ಎಂದು ಹೇಳಿದರು ಮೌನ ಅನುಷ್ಠಾನ ಮಂಗಲ ಕಾರ್ಯಕ್ರಮಕ್ಕೆ ನಾಡಿನ ಹರ ಗುರು ಚರಮೂರ್ತಿಗಳು ಆಗಮಿಸುತ್ತಿದ್ದು ಗೊರಬಾಳ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮದ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು
ಇದೇ ಸಂದರ್ಭದಲ್ಲಿ ಹಿರಿಯರಾದ ರಾಮನಗೌಡ ಕವಡಿಮಟ್ಟಿ ಸಂತೋಷ ಬಂಡರಗಲ್ಲ. ಮಲ್ಲನಗೌಡ ಪಾಟೀಲ್ ರಾಂಪುರ್.ಮಲ್ಲನಗೌಡ ಗೌಡರ. ಮಲ್ಲಿಕಾರ್ಜುನ ಅಮಾತ್ಯಪ್ಪನವರ. ಪರಶುರಾಮ ಅಮಾತ್ಯಪ್ಪನವರ. ದೊಡ್ಡನಗೌಡ ಗೌಡರ, ಸಂಗನಗೌಡ ಗೌಡರ, ಕಾಳಪ್ಪ ಬಡಿಗೇರ. ದೊಡ್ಡಯ್ಯ ಹಿರೇಮಠ ಶಿವನಗೌಡ ಗೌಡರ ಹೇರೂರು. ಹುಚ್ಚಪ್ಪ ಜಾಲಗರ.ಬಾಲಪ್ಪ ಘಂಟೆ. ದೇವಪ್ಪ ಬಿಂಗಿ ಹಾಗೂ ಗ್ರಾಮದ ಹಿರಿಯರು ಇದ್ದರು.