Ilkal :ಮುಖಾಮುಖಿ ಸಾಮಾಜಿಕ ಸ್ಪಂದನ ಸಂಸ್ಥೆಯ ವತಿಯಿಂದ ಮನೆಗೊಂದು ಮರ ಊರಿಗೊಂದು ವನ ಎಂಬ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ರಾಜು ಎಂ ಬೋರಾ

 


ಮುಖಾಮುಖಿ ಸಾಮಾಜಿಕ ಸ್ಪಂದನ ಸಂಸ್ಥೆಯ ವತಿಯಿಂದ ಮನೆಗೊಂದು ಮರ ಊರಿಗೊಂದು ವನ ಎಂಬ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ರಾಜು ಎಂ ಬೋರಾ


ವಿಶ್ವ ಪರಿಸರ ವರ್ಷಾಚರಣೆ ಅಂಗವಾಗಿ ಗೊರಬಾಳ ಗ್ರಾಮದ ಮುಖಾಮುಖಿ ಸಾಮಾಜಿಕ ಸ್ಪಂದನ ಸಂಸ್ಥೆಯು, "" ಮನೆಗೊಂದು ಮರ ಊರಿಗೊಂದು ವನ "" ಎಂಬ ಅಭಿಯಾನವನ್ನು ಸಂಸ್ಥೆಯ ಅಧ್ಯಕ್ಷರಾದ ಶ್ರೀ ರಾಜು ಎಂ ಬೋರಾ ಅವರು ಚಾಲನೆ ನೀಡುವುದರ ಮೂಲಕ ಇಲಕಲ್ಲ ನಗರದ ವಿವಿಧಡೆ ಅಂದರೆ ಶಿವಾನಿ ಆಸ್ಪತ್ರೆ ಆವರಣದಲ್ಲಿ, ಇಲಕಲ್ಲ ಸಾರಿಗೆ ಘಟಕದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಕೇಂದ್ರ ಶಾಲೆಯಲ್ಲಿ, ರಾಷ್ಟ್ರೀಯ ಹೆದ್ದಾರಿ ಗೆ ಹೊಂದಿರುವ ಶತಾಯುಷಿ ಪರಮಪೂಜ್ಯ ಸಿದ್ದ ಬಸವ ಚನ್ನವೀರ ಸ್ವಾಮಿಗಳ ಶ್ರೀ ಗುರು ದೇವಾ ಶ್ರಮದಲ್ಲಿ, ಹಾಗೂ ಇಲಕಲ್ಲ ನಗರದ ಬಸ್ ನಿಲ್ದಾಣದ ಆವರಣದಲ್ಲಿ ಮತ್ತು ಇನ್ನಿತರ ಸ್ಥಳಗಳಲ್ಲಿ ಸಾರ್ವಜನಿಕರಿಗೆ ಉಚಿತ ಸಸಿಗಳನ್ನು ವಿತರಿಸಲಾಯಿತು ಈ ಸಂದರ್ಭದಲ್ಲಿ ಗ್ರಾನೆಟ್ ಉದ್ದಿಮೆದರಾದ ಶ್ರೀ ಶಾಂತ ಕುಮಾರ ಗುರಮ್, ಸಾರಿಗೆ ಘಟಕದ ವ್ಯವ ಸ್ಥಾಪಕರಾದ ಶ್ರೀ ಗೌಡಪ್ಪ ಬಿರಾದರ್, ಶ್ರೀ ಸಿ ಆರ್ ನಂದೀಶ್, ನಿವೃತ್ತ ಪ್ರಾಧ್ಯಾಪಕರಾದ ಶ್ರೀ ರಾಜೇಂದ್ರ ಜುಂಜ, ಕೇಂದ್ರಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಶ್ರೀಧರ್ ಜೋಗಿನ್, ಶ್ರೀಕಾಂತ್ ಬಂಡಿ ವಡ್ಡರ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಶೇಖರಯ್ಯ ಹಿರೇಮಠ್ ಎಸ್ ಎಸ್ ಪಾಟೀಲ್, ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು







Post a Comment

Previous Post Next Post

Contact Form