Ilkal:ಎಂ ಪಿ ಎಸ್ ಬಲಕುಂದಿ ತಾಂಡಾ ಶಾಲೆಯ ವಿದ್ಯಾರ್ಥಿನಿ ಕುಮಾರಿ ಸುಪ್ರೀತಾ ದೊಡ್ಡಪ್ಪ ರಾಠೋಡ,ಪ್ರಾಥಮಿಕ ಶಾಲಾ ಕ್ರೀಡಾಕೂಟದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

 


ಪ್ರಾಥಮಿಕ ಶಾಲಾ ಕ್ರೀಡಾಕೂಟದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

ಎಂ ಪಿ ಎಸ್ ಬಲಕುಂದಿ ತಾಂಡಾ ಶಾಲೆಯ ವಿದ್ಯಾರ್ಥಿನಿ ಕುಮಾರಿ ಸುಪ್ರೀತಾ ದೊಡ್ಡಪ್ಪ ರಾಠೋಡ ,ನಿನ್ನೆ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಉದ್ದ ಜಿಗಿತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆ ಆಗಿರುವುದಕ್ಕೆ ಶಾಲೆಯ ಸಿಬ್ಬಂದಿ ಬಳಗ ವಿದ್ಯಾರ್ಥಿನಿಗೆ ಸನ್ಮಾನಿಸಿ ಗೌರವಿಸಿದರು.ಹಾಗೂ ಮಾರ್ಗದರ್ಶನ ಮಾಡಿದ ದೈಹಿಕ ಶಿಕ್ಷಕಿಯರಾದ ಶ್ರೀಮತಿ ಆರ್ ಎಸ್ ಕೊಡಗಲಿ ಯವರಿಗೆ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮಾತನಾಡಿದ ಶಾಲೆಯ ಮುಖ್ಯ ಗುರುಗಳಾದ ಪಿ ಎಸ್ ಪಮ್ಮಾರ ಸುಪ್ರೀತಾ ಅತ್ಯಂತ ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದು ಮುಂದಿನ ಹಂತದಲ್ಲಿಯೂ ಸಹ ವಿಜಯಿಯಾಗಿ ಶಾಲೆಯ,ತಾಲೂಕಿನ ಹಾಗೂ ಜಿಲ್ಲೆಯ ಕೀರ್ತಿ ತರಲೆಂದು ಹಾರೈಸಿದರು


ಈ ಸಂದರ್ಭದಲ್ಲಿ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ದೊಡ್ಡಪ್ಪ ಚವ್ಹಾಣ,ಉಪಾಧ್ಯಕ್ಷ ವಿಠಲ ಚವ್ಹಾಣ,ಮುಖ್ಯಗುರುಗಳಾದ ಪರಶುರಾಮ ಪಮ್ಮಾರ,ಎಂ ಎಸ್ ಬೀಳಗಿ,ಶ್ರೀಮತಿ ಜಿ ಕೆ ಮಠ,ಶ್ರೀ ಎ ಡಿ ಬಾಗವಾನ,ಶ್ರೀಮತಿ ಎಂ ಎನ್ ಅರಳಿಕಟ್ಟಿ,ಶ್ರೀಮತಿ ಎಸ್ ಎಲ್ ಜೋಗಿನ,ಶ್ರೀಮತಿ ಎಂ ಪಿ ಚೇಗೂರ,ಶ್ರೀಮತಿ ಪಿ ಎಸ್ ಹೊಸೂರು,ಶ್ರೀಮತಿ ಎಸ್ ಎಂ ಮಲಗಿಹಾಳ,ಶ್ರೀ ಪ್ರಸನ್ನ ಮೇಗಡಿ,ಶ್ರೀಮತಿ ಸಾಯಿರಾ ಹೆರಕಲ್ ಶುಭ ಕೋರಿದ್ದಾರೆ.

Post a Comment

Previous Post Next Post

Contact Form