Ilkal :ಇಳಕಲ್ ತಾಲೂಕ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಇದೆ ದಿನಾಂಕ 14/10/2024 ರಂದು ಇಲಕಲ್ಲ ತಾಲೂಕ ಕಚೇರಿಯ ಮುಂದೆ ಅನಿರ್ದಿಷ್ಟ ಅವಧಿಯವರೆಗೆ ಸತ್ಯಾಗ್ರಹ

 


ಕೃಷಿ ಜಮೀನಿನಲ್ಲಿ ಅಧಿಕೃತವಾಗಿ ಪರವಣಗೆ ಪಡೆಯದೆ ಕಲ್ಲು ಮಾರಾಟ ಮಳಿಗೆಯನ್ನು ಕಿತ್ತು ಹಾಕುವವರೆಗೂ ಮತ್ತು ಚೆಕ್ ಪೋಸ್ಟ್ ಮಾಡುವವರೆಗೂ ಕರ್ನಾಟಕ ರಕ್ಷಣಾ ವೇದಿಕೆ ಇಳಕಲ್ ತಾಲೂಕ ವತಿಯಿಂದ ಅನಿರ್ದಿಷ್ಟ ಧರಣಿ ಸತ್ಯಾಗ್ರಹ 


ಕರ್ನಾಟಕ ರಕ್ಷಣಾ ವೇದಿಕೆ 12.09.2024 ರಂದು ಹಿರೇ ಉಪ್ಪನಾಳ ಗ್ರಾಮದ ಜಮೀನ ರಿ. ಸ. ನಂ 27/3 ಕ್ಷೇತ್ರ 02:04 ಮತ್ತು 27/6 ಕ್ಷೇತ್ರ02:05 ಜಮೀನು, ಬಸಪ್ಪ ತಂದೆ ಪರಪ್ಪ ಸಜ್ಜನ ಇವರ ಹೆಸರಿನಲ್ಲಿ ಇದ್ದು ಸದರಿ ಜಮೀನುಗಳು ಕೃಷಿಗೆ ಯೋಗ್ಯವಾದ ಜಮೀನುಗಳು ಇರುತ್ತದೆ. 

ಇದರ ವಿಚಾರವಾಗಿ ತಮ್ಮಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ದಾಖಲೆ ಸಮೇತ ವರದಿ ಮಾಡಿದರೂ ಕೂಡ ತಾವುಗಳು ಯಾವುದೇ ರೀತಿ ಕ್ರಮ ಕೈಗೊಂಡಿಲ್ಲ, ಅಲ್ಲಿ ತಾವುಗಳು ಹೋಗಿ ಸ್ಥಳ ಪರಿಶೀಲನೆ ಮಾಡಿದರು ಕೂಡ ಏನು ಪ್ರಯೋಜನವಾಗಿಲ್ಲ ಆ ಕಾರಣಕ್ಕೋಸ್ಕರ ಕರ್ನಾಟಕ ರಕ್ಷಣಾ ವೇದಿಕೆ ತಮ್ಮ ಕಚೇರಿಯ ಮುಂದೆ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಂಡಿದೆ, ಹಾಗೆ ಕರ್ನಾಟಕ ರಕ್ಷಣಾ ವೇದಿಕೆ ದಿನಾಂಕ 22/08/2024 ರಂದು ಇಲಕಲ್ಲ ಹಾಗೂ ಹುನುಗುಂದ ತಾಲೂಕಗಳಲ್ಲಿ ಗ್ರಾನೈಟ್ ಕಲ್ಲುಗಳನ್ನು ಮಾರಾಟ ಮಾಡುವ ಮತ್ತು ಪ್ರದರ್ಶಿಸುವ ಸಾರ್ವಜನಿಕರಿಗೆ ಮತ್ತು ಸರ್ಕಾರಕ್ಕೆ ಆಗುವ ಅವ್ಯವಹಾರಗಳು ಬಗ್ಗೆ ಕುರಿತು ಚೆಕ್ ಪೋಸ್ಟ್ ಮಾಡುವಂತೆ ದಿನಾಂಕ 14/10/2024 ರಂದು ಇಲಕಲ್ಲ ತಾಲೂಕ ಕಚೇರಿಯ ಮುಂದೆ ಅನಿದಿಷ್ಟ ಅವಧಿಯವರೆಗೆ ಸತ್ಯಾಗ್ರಹ ಹಮ್ಮಿಕೊಂಡಿದೆ ಇಲಕಲ್ಲ ಮತ್ತು ಹುನಗುಂದ ಜನತೆಗೆ ಯಾರ್ಯಾರು ಕಲ್ಲು ಶೋರೂಮ್ ಗಳಿಂದ ಮೋಸ ಹೋಗಿದ್ದೀರಿ ಅವರೆಲ್ಲರೂ ಈ ಹೋರಾಟದಲ್ಲಿ ಪಾಲ್ಗೊಳ್ಳಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಇಳಕಲ್ ತಾಲೂಕ ಅಧ್ಯಕ್ಷ ಮಹಾಂತೇಶಗೌಡ ವಂಕಲಕುಂಟಿ ಅವರು ಮಾಧ್ಯಮದವರ ಮುಖಾಂತರ ವಿನಂತಿಸಿದ್ದಾರೆ

Post a Comment

Previous Post Next Post

Contact Form