ಮುಖಾಮುಖಿ ಸಾಮಾಜಿಕ ಸ್ಪಂದನ ಸಂಸ್ಥೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗೊರಬಾಳ್ ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರಪಿತ ಶ್ರೀ ಮಹಾತ್ಮ ಗಾಂಧೀಜಿ ಯವರ155 ನೇ ಜಯಂತಿ ಮಾಜಿ ಪ್ರಧಾನಿ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಇವರ 120 ನೇ ಜಯಂತಿಯನ್ನು ರಘುಪತಿ ರಾಘವ ರಾಜಾರಾಮ್ ಎಂಬ ಮಂತ್ರದ ಮೂಲಕ ಜಯಂತಿಯನ್ನ ಗೊರಬಾಳ್ ಗ್ರಾಮದಲ್ಲಿ ಆಚರಿಸಲಾಯಿತು ಸಮಾರಂಭ ದ ಅಧ್ಯಕ್ಷತೆಯನ್ನು ಶ್ರೀ ಚಳಗೇರಿ ಗುರುಗಳು ವಹಿಸಿದ್ದರು ಮುಖಮುಖಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಶೇಖರ್ ಹಿರೇಮಠ ಮಾತನಾಡಿ ಮಹಾತ್ಮ ಗಾಂಧೀಜಿಯವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡು ಧ್ಯೇಯ ವಾಕ್ಯವಾದ ""ಸತ್ಯಮೇವ ಜಯತೆ " ಎಂಬ ಮಂತ್ರವನ್ನು ನಮ್ಮ ಜೀವನದಲ್ಲಿ ರೂಡಿಸಿಕೊಂಡು ಶಾಂತಿ, ಅಹಿಂಸೆ,ಅಂತ ಹ ವಾತಾವರಣವನ್ನು ನಿರ್ಮಾಣ ಮಾಡಿ ಉತ್ತಮ ಸಮಾಜ ಕಟ್ಟುವಲ್ಲಿ ಪ್ರತಿಯೊಬ್ಬರೂ ಪಣತೊಡಬೇಕು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಇವರ ಪ್ರಾಮಾಣಿಕತೆ ಎಲ್ಲರಿಗೂ ಮಾದರಿಯಾಗಬೇಕು ಅಂದಾಗ ಮಾತ್ರ ಇವರ ಜಯಂತಿಯನ್ನು ಆಚರಿಸಿದಕ್ಕೂ ಸಾರ್ಥಕ ಅನ್ನಿಸುತ್ತದೆ ಎಂದರು. ಇದೇ ಸಮಾರಂಭದಲ್ಲಿ ಇಲ್ಕಲ್ ನಗರದ ಯುವ ಉತ್ಸಾಹಿ ಶ್ರೀ ಯಾಕೋಬ್ ಎಲಿಗಾರ್ ಯಾವುದೇ ಜಾತಿ ಭೇದವಿಲ್ಲವಿದೆ ಆಸ್ಪತ್ರೆಯಲ್ಲಿರುವ ತುರ್ತು ಸಮಯಕ್ಕೆ ಬೇಕಾಗುವ ರಕ್ತವನ್ನು, 26 ಬಾರಿ ರಕ್ತ ದಾನ ಮಾಡಿ ಮಾನವೀಯತೆ ಮೆರೆದ ಇವರು ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಾರೆ. ಈ ಸು ಸಂದರ್ಭದಲ್ಲಿ ಮುಖಾಮುಖಿ ಸಂಸ್ಥೆ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗೊರಬಾಳ್ ರಕ್ತದಾನಿಯನ್ನು ಗೌರವಿಸಿ ಸನ್ಮಾನಿಸಿದರು.ಈ ಕಾರ್ಯಕ್ರಮದಲ್ಲಿ ಶಾಲೆಯ ಗುರುಮಾತೆಯರು, ಮುಖಮುಖಿ ಸಂಸ್ಥೆಯ ಎಸ್ ಎಸ್ ಪಾಟೀಲ್, ಶಾಲಾ ಮುದ್ದು ಮಕ್ಕಳು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಎ ಆರ್ ಚಿತ್ತರಗಿ ಗುರುಗಳು ನೆರವೇರಿಸಿದರು. ಗುರುಮಾತೆಯರು ವಂದಿಸಿದರು..