Ilkal: ಶಾವಂತ್ರಮ್ಮ ಹಿರೇಮಠ್ ಅಜ್ಜಿಗೆ ನೂರರ ಸಂಭ್ರಮ ಹಿರೇಮಠ್ ಕುಟುಂಬದಲ್ಲಿ ನಾಳೆ ಸಂಭ್ರಮಾಚರಣೆ

 


20/10/2024ರಂದು ತುಂಬ ಗ್ರಾಮದಲ್ಲಿ ಶತಾಯುಷಿ ಅಜ್ಜಿಯ ಶತಮಾನೋತ್ಸವ ಕಾರ್ಯಕ್ರಮ


ಇಳಕಲ್ಲ ಸಮೀಪದ ತುಂಬ ಗ್ರಾಮದ ಹಿರೇಮಠ ಮನೆತನದ ಶತಾಯುಷಿ ಶಾವಂತ್ರಮ್ಮ ಅಜ್ಜಿಯ ಶತಮಾನೋತ್ಸವ ಕಾರ್ಯಕ್ರಮವನ್ನು 20/10/2024 ರಂದು ಮುಂಜಾನೆ ೧೦ ಗಂಟೆಗೆ ಹಿರೇಮಠ ಕುಟುಂಬ ಪರಿವಾರದವರು ಹಮ್ಮಿಕೊಂಡಿದ್ದು ಅದ್ದೂರಿಯಾಗಿ ಆಚರಣೆ ಮಾಡಲು ತಯಾರಿ ಮಾಡಿಕೊಂಡಿದ್ದು ದಿವಂಗತ ನಿವೃತ್ತ ಶಿಕ್ಷಕ ಶ್ರೀ ಗುರುಸಿದ್ದಯ್ಯ ಹಿರೇಮಠ ಅವರ ಧರ್ಮಪತ್ನಿ ಶಾವಂತ್ರಮ್ಮಜ್ಜಿ ಅವರ 100 ವರ್ಷಗಳ ಕಾಲ ಸಾರ್ಥಕ ಬದುಕು ಸಾಗಿಸಿದ ಪ್ರಯುಕ್ತ ಕುಟುಂಬ ಸದಸ್ಯರೆಲ್ಲರೂ ಸೇರಿಕೊಂಡು ಸುಕ್ಷೇತ್ರ ಗುಡದೂರು ನೀಲಕಂಠ ತಾತನವರು

ಸಜ್ಜಲಗುಡ್ಡ ದೊಡ್ಡಬಸವಾರ್ಯ ತಾತನವರು, ನಂದವಾಡಗಿ ಷ.ಬ್ರ. ಮಹಾಂತಲಿಂಗ ಶಿವಾಚಾರ್ಯರು,ಡಾ ಚೆನ್ನಬಸವದೆಶಿಕೇಂದ್ರ ಶಿವಾಚಾರ್ಯರು ಮತ್ತು ಚಳಗೇರಿ ವೀರಸಂಗಮೇಶ್ವರ ಶಿವಾಚಾರ್ಯರು ಪೂಜ್ಯರ ಸನ್ಮುಖದಲ್ಲಿ ಅದ್ದೂರಿ ಕಾರ್ಯಕ್ರಮ ಆಚರಿಸಲು ನಿರ್ಧರಿಸಿದ್ದು. ಮಕ್ಕಳು ಮೊಮ್ಮಕ್ಕಳು ಮರಿ ಮೊಮ್ಮಕ್ಕಳೆಲ್ಲರೂ ಸೇರಿಕೊಂಡು ಶತಮಾನೋತ್ಸವದ ಕಾರ್ಯಕ್ರಮವನ್ನು ಕೈಗೊಂಡು ಅಜ್ಜಿಯ ಸಾರ್ಥಕ ಬದುಕನ್ನು ಸಮಾಜಕ್ಕೆ ತಿಳಿಸಲು ಮುಂದಾಗಿದ್ದು ಗ್ರಾಮಸ್ಥರೆಲ್ಲರಿಗೂ ಸಂತಸದ ವಾತಾವರಣ ಮೂಡಿಸಿದೆ ಕುಟುಂಬ ಸದಸ್ಯರೆಲ್ಲರೂ ಸೇರಿಕೊಂಡು ಅಜ್ಜಿಯ ಸಾರ್ಥಕ ಬದುಕಿನ ಸಾಧನೆಯ ಗುರಿ ಮುಟ್ಟಿದ ಪ್ರಯುಕ್ತ ಮೊಮ್ಮಕ್ಕಳು ಮರಿ ಮೊಮ್ಮಕ್ಕಳೆಲ್ಲರೂ ಸೇರಿಕೊಂಡು ಉಭಯ ಪೂಜ್ಯರಿಂದ ಬೆಳ್ಳಿಹಾರ ಸಮರ್ಪಣೆ ಮಾಡಲಿದ್ದಾರೆ ಹಾಗಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ತುಂಬ ಗ್ರಾಮ ಸುತ್ತಮುತ್ತಲಿನ ಗ್ರಾಮದ ಹಾಗೂ ಎಲ್ಲಾ ಹಳ್ಳಿಯ ನಾಗರಿಕರು ಆಗಮಿಸಿ ಯಶಸ್ವಿಗೊಳಿಸಬೇಕೆಂದು ಹಾಗೂ ಕಾರ್ಯಕ್ರಮದ ಆಯೋಜಕರು ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ 

Post a Comment

Previous Post Next Post

Contact Form