ಕೌಶಲ್ಯ ಪಥ ತುಮಕೂರು ಹಾಗೂ ಮುಖಾಮುಖಿ ಸಾಮಾಜಿಕ ಸ್ಪಂದನ ಸಂಸ್ಥೆಯ ಸಂಯುಕ್ತ ಆಶಯದಲ್ಲಿ ಗೊರಬಾಳದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಐದನೇ ಆರನೇ ಹಾಗೂ 7ನೇ ತರಗತಿಯ ವಿದ್ಯಾರ್ಥಿಗಳಿಗೆ ಒಂದು ತಿಂಗಳ ಕಾಲ ಮಕ್ಕಳಿಗೆ ಉಚಿತ ಸ್ಪೋಕನ್ ಇಂಗ್ಲೀಷ್ ತರಬೇತಿ ಶಿಬಿರವನ್ನು ಆರಂಭಿಸಲಾಗಿತ್ತು ಕೌಶಲ್ಯ ಪಥದ ಸಂಯೋಜಕರಾದ ವಿನಯ್ ಚಳಗೇರಿ, ಬುಡ್ಡು ಸಂಸ್ಥೆಯ ಪದಾಧಿಕಾರಿಗಳಾದ ಎಸ್ ಎಸ್ ಪಾಟೀಲ್, ಶೇಖರ ಹಿರೇಮಠ್ ಶಾಲಾ ಮುಖ್ಯ ಗುರುರಾದ ಸಿ ವಿ ಬಡಿಗೇರ ಇಂಗ್ಲೀಷ್ ಕಲಿಕಾ ಶಿಕ್ಷಕರಾದ ಶ್ರೀಮತಿ ಪ್ರಿಯಾಂಕ ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು