2024-29 ನೇ ಅವಧಿಗೆ ನಡೆದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಇಳಕಲ್ ತಾಲೂಕು ಶಾಖೆಯ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷರಾಗಿದ್ದ ಪರಶುರಾಮ ಪಮ್ಮಾರ ನೇತೃತ್ವದ ತಂಡ ಸತತ ಎರಡನೇ ಅವಧಿಗೆ ಜಯಭೇರಿ ಬಾರಿಸಿದೆ.
23 ಸರ್ಕಾರಿ ಇಲಾಖೆಗಳ ,32 ನೂತನ ನಿರ್ದೇಶಕರುಗಳು ಒಕ್ಕೊರಲಿನಿಂದ ಅಧ್ಯಕ್ಷರಾಗಿ ಶಿಕ್ಷಣ ಇಲಾಖೆಯ ಪರಶುರಾಮ ಎಸ್ ಪಮ್ಮಾರ ರವರನ್ನು,ರಾಜ್ಯ ಪರಿಷತ್ ಸದಸ್ಯರಾಗಿ ಕಂದಾಯ ಇಲಾಖೆಯ ಈಶ್ವರ ಎಸ್ ಗಡ್ಡಿ ರವರನ್ನು ಹಾಗೂ ಹಾಗೂ ಖಜಾಂಚಿಗಳಾಗಿ ಆರೋಗ್ಯ ಇಲಾಖೆಯ ಶರಣು ಕೊಣ್ಣೂರ ರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿಗಳಾದ ಜಗದೀಶ ಬಿ ಅರಳಿಕಟ್ಟಿ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.