ಜಿಲ್ಲಾ ಪಂಚಾಯತ ಬಾಗಲಕೋಟ ತಾಲೂಕ ಪಂಚಾಯತ ಹುನಗುಂದ ಇಳಕಲ್ ಅವಳಿ ತಾಲೂಕಿನ ಪ್ರಗತಿ ಪರಿಶೀಲನಾ ಸಭೆ
ಕರ್ನಾಟಕ ವೀರಶೈವ ಲಿಂಗಾಯತ ಅಭಿರುದ್ದಿ ನಿಗಮದ ಅಧ್ಯಕ್ಷ ಹುನಗುಂದ ಮತಕ್ಷೇತ್ರದ ಶಾಸಕ ವಿಜಯಾನಂದ್ ಎಸ್ ಕಾಶಪ್ಪನವರ ಅಧ್ಯಕ್ಷತೆಯಲ್ಲಿ ಇಳಕಲ್ ತಾಲೂಕ್ ಪಂಚಾಯತ್ ಆವರಣದಲ್ಲಿ 29/11/2024ರಂದು ಪ್ರಗತಿ ಪರಿಶೀಲನಾ ಸಭೆ ಜರುಗಿತು. ಈ ಸಂದರ್ಭದಲ್ಲಿ ಇಳಕಲ್ ಹುನಗುಂದ ತಾಲೂಕಿನ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಕಾರ್ಯದರ್ಶಿಗಳು ದ್ವಿತೀಯ ದರ್ಜೆ ಲೆಕ್ಕ ಸಹಾಯಕರುಗಳು ಮತ್ತು ನರೇಗಾ ಯೋಜನೆಯ ತಾಂತ್ರಿಕ ಸಹಾಯಕರುಗಳು ಪಾಲ್ಗೊಂಡಿದರು..
ವರದಿ : ಚನ್ನು ವಿ ಗೋನಾಳಮಠ