Benglur : ಮಾಜಿ ಸಿಎಂ ಎಸ್‌ಎಂ ಕೃಷ್ಣ ಇನ್ನಿಲ್ಲ

 


ಮಾಜಿ ಸಿಎಂ ಎಸ್‌ಎಂ ಕೃಷ್ಣ ಇನ್ನಿಲ್ಲ


ಕರ್ನಾಟಕ ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ವಿದೇಶಾಂಗ ಸಚಿವ, ಹಿರಿಯ ರಾಜಕಾರಣಿ ಎಸ್‌.ಎಂ. ಕೃಷ್ಣ (92) ಅವರು ಮಂಗಳವಾರ ಬೆಳಗ್ಗೆ 3:30ಕ್ಕೆ ವಿಧಿವಶರಾಗಿದ್ದಾರೆ.


ಮಂಗಳವಾರ ನಸುಕಿನ ಜಾವ 2 ಗಂಟೆಗೆ ಕೃಷ್ಣ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಉಸಿರಾಟದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ವೈದ್ಯರಿಗೆ ಕುಟುಂಬಸ್ಥರು ಮಾಹಿತಿ ನೀಡಿದ್ದರು. ಕೂಡಲೇ ವೈದ್ಯರ ಮನೆಗೆ ಆಗಮಿಸಿದ್ದರು. ವೈದ್ಯರು ಎಸ್‌ಎಂ ಕೃಷ್ಣ ಮೃತಪಟ್ಟ ಬಗ್ಗೆ ಮಾಹಿತಿ ನೀಡಿದರು. 

ಎಸ್ಎಂ ಕೃಷ್ಣ ಅವರ ನಿಧನದಿಂದ ಇಡೀ ಕುಟುಂಬ ಮತ್ತು ಅವರ ಅಭಿಮಾನಿ ಬಳಗ ಶೋಕ ಸಾಗರದಲ್ಲಿ ಮುಳುಗಿದೆ, 

ಎಸ್ಎಂ ಕೃಷ್ಣ ಅವರ ನಿಧನಕ್ಕೆ ರಾಜಕಾರಣಿಗಳು ಗಣ್ಯರು ಸಂತಾಪ ಸೂಚಿಸಿದ್ದಾರೆ

Post a Comment

Previous Post Next Post

Contact Form