Hungund : ವಿದ್ಯಾರ್ಥಿನಿ ಸಂಗೀತಾ ಮಾಗಿ ವಿಶ್ವವಿದ್ಯಾಲಯದ ಖೋಖೋ ತಂಡಕ್ಕೆ ಆಯ್ಕೆ

 


ಹುನಗುಂದ:ಡಿ 21ರಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹುನಗುಂದ ಆವರಣದಲ್ಲಿ ನಡೆದ ಬಾಗಲಕೋಟ ವಿಶ್ವವಿದ್ಯಾಲಯ ಜಮಖಂಡಿ ಖೋ ಖೋ ಆಯ್ಕೆ ಪ್ರಕ್ರಿಯೆ ನಡೆಸಲಾಗಿತ್ತು.ಈ ಆಯ್ಕೆ ಪ್ರಕ್ರೀಯೆಯಲ್ಲಿ ಹುನಗುಂದತಾಲೂಕಿನ ಸೂಳೇಭಾವಿ ಗ್ರಾಮದ ಪ್ರತಿಷ್ಠಿತ ವಿದ್ಯಾಸಂಸ್ಥೆ ಶ್ರೀ ರಾಮಯ್ಯ ಸ್ವಾಮಿ ಕಲಾ,ವಾಣಿಜ್ಯಮಹಾವಿದ್ಯಾಲಯದ ಬಿ.ಎ. ತೃತೀಯ ಸೆಮಿಸ್ಟರ್ ವಿಧ್ಯಾರ್ಥಿ ಕುಮಾರಿ ಸಂಗೀತಾ ಮಾಗಿ ಭಾಗವಹಿಸಿ ವಿಶ್ವವಿದ್ಯಾಲಯದ ಖೋಖೋ ತಂಡಕ್ಕೆ ಆಯ್ಕೆಯಾಗಿ ಸಂಸ್ಥೆಯ ಕೀರ್ತಿ ಹೆಚ್ಚಿಸಿದ್ದಾರೆ.ಇದೇ ಡಿ 28,29, 30,31 ರವರೆಗೆ ನಾಲ್ಕು ದಿನಗಳ ಕಾಲ ನಡೆಯಲಿರುವ ಅಂತರ್ ರಾಜ್ಯ ವಿಶ್ವವಿದ್ಯಾಲಯ ಖೋ ಖೋ ಪಂದ್ಯದಲ್ಲಿ ಭಾಗವಹಿಸಿ ಸಂಸ್ಥೆಯ ಕೀರ್ತಿಪತಾಕಿಯನ್ನು ಬೆಳಗಿಸಲಿ ಎಂದು ವಿದ್ಯಾರ್ಥಿನಿಗೆ ಸಂಸ್ಥೆಯ ಅಧ್ಯಕ್ಷರಾದ ರವೀಂದ್ರ ಕಲಬುರ್ಗಿ ಹಾಗೂ ಮಹಾ ವಿದ್ಯಾಲಯದ ಪ್ರಾಚಾರ್ಯರಾದ ಎಸ್.ಎಸ್.ಹೊಸಮನಿ,ದೈಹಿಕ ಶಿಕ್ಷರಾದ ಬಸವರಾಜ ಆರ್.ಭಜಂತ್ರಿ ಮತ್ತು ಉಪನ್ಯಾಸಕ ವರ್ಗದವರಿಂದ ವಿದ್ಯಾರ್ಥಿನಿಗೆ ಹೃತ್ಪೂರ್ವಕ ಅಭಿಂದನೆಗಳನ್ನು ಸಲ್ಲಿಸಿದ್ದಾರೆ.

Post a Comment

Previous Post Next Post

Contact Form