ಇಳಕಲ್:ತಾಲೂಕಿನ ಪ್ರತಿಷ್ಠಿತ ವಿದ್ಯಾಸಂಸ್ಥೆ ಶ್ರೀ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿ ಚುನಾವಣೆಗೆ ಡಿ.21 ಕೊನೆಯ ದಿನವಾಗಿದ್ದು,ಇಂದು ಅಪಾರ ಬೆಂಬಲಿ ಗರೊಂದಿಗೆ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಅಧ್ಯಕ್ಷರು ಜನಪ್ರೀಯ ಶಾಸಕ ವಿಜಯಾನಂದ ಎಸ್.ಕಾಶಪ್ಪನವರು
ದೇಶದ ಭಾವುಟದಲ್ಲಿ ಸಮೃದ್ಧಿ ಸಂಕೇತ ವಾಗಿರುವ 'ಹಸಿರು' ಶಾಲು ಹೆಗಲ ಮೇಲೆ ಧರಿಸಿಕೊಂಡು ನಾಮಪತ್ರ ಸಲ್ಲಿಸಿದರು.
ಯಾರೆ ರಾಜಕೀಯ ಮುಖಂಡರು ತಮ್ಮ ಹೆಗಲ ಮೇಲೆ ರೈತರ ಹಸಿರು ಶಾಲು ಧರಿಸಿಕಿಂಡುಹೋರಟರೇ ಒಂದು ಗತ್ತು,ಗಮ್ಮತ್ತು ಇದ್ದೇ ಇರುತ್ತದೆ ಅದಕ್ಕಾಗಿ ರೈತರ ಹಸಿರು ಶಾಲು ವಿಜಯದ ಸಂಕೇತ ವಾದ್ದರಿಂದ ಹೆಚ್ಚಾಗಿ ರಾಜಕೀಯ ನಾಯಕರು,ಇಂತಹ ಸಮೃದ್ಧಿ ಸಂಕೇತವನ್ನು ಬಳಸಲು ಮುಂದಾಗುತ್ತಾರೆ.
ಇದೇ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ವೆಂಕಟೇಶ ಸಾಕಾ,ಪಂಚಮಸಾಲಿ ತಾಲೂಕಾ ಅಧ್ಯಕ್ಷ ಮಹಾಂತ ಗೌಡ ಪಾಟೀಲ,ನಗರಸಭೆ ಮಾಜಿ ಅಧ್ಯಕ್ಷ ರಾಘುವೆಂದ್ರ ಚಿಂಚಮಿ,ನಗರಸಭೆ ಸದಸ್ಯರು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು