SVM ಸಂಘಕ್ಕೆ : ಶಾಸಕ ಕಾಶಪ್ಪನವರ ಅವಿರೋಧ ಆಯ್ಕೆ
ಬಾಗಲಕೋಟ ಜಿಲ್ಲೆಯ ಇಳಕಲ್ : ಶ್ರೀ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಾಹಕ ಮಂಡಳಿಯ ಚುನಾವಣೆಗೆ ಆರು ಸ್ಥಾನಗಳಿಗೆ ಶಾಸಕರು ಸೇರಿದಂತೆ ಒಟ್ಟು 11 ಜನ ನಾಮಪತ್ರ ಸಲ್ಲಿಸಿದ್ದರು
ಸಂಘ ಸಂಸ್ಥೆಗಳ ಪ್ರತಿನಿಧಿ ಸ್ಥಾನಕ್ಕೆ ಶಾಸಕ ವಿಜಯಾನಂದ ಕಾಶಪ್ಪನವರ ಒಬ್ಬರೇ ನಾಮಪತ್ರ ಸಲ್ಲಿಸಿದ್ದು ಅವರಿಗೆ ಪ್ರತಿಸ್ಪರ್ಧಿ ಇಲ್ಲದ ಕಾರಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಗಳು ಘೋಷಣೆ ಮಾಡಿದ್ದಾರೆ,
ಇದರಿಂದ ಶಾಸಕ ವಿಜಯಾನಂದ್ ಕಾಶಪ್ಪನವರು ಗೆಲುವಿನ ನಾಗಾಲೋಟ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ
ಎಸ್ ವಿ ಎಂ ಸಂಘದ ನೂತನ ಚೇರ್ಮನ್ ಆಗಿ ಆಯ್ಕೆಯಾದ ಶಾಸಕ ಕಾಶಪ್ಪನವರ್ ಅವರು ಕ್ಷೇತ್ರದ ಅಭಿವೃದ್ಧಿಯಂತೆ ಎಸ್ ವಿ ಎಂ ಸಂಘವು ಕೂಡ ಅಭಿವೃದ್ಧಿ ಮಾಡುತ್ತೇನೆ ಎಂದು ಹೇಳಿದ್ದಾರೆ