Bagalkot : ಅಂಬಿಗರ ಸಮಾಜದ ಯವಕರಿಂದ ಚೌಡಯ್ಯನವರ ಅದ್ದೂರಿ ಶೋಭಾಯಾತ್ರೆ

 


ಶ್ರೀ ನಿಜ ಶರಣ ಅಂಬಿಗರ ಚೌಡಯ್ಯನವರ 905ನೇ ಜಯಂತಿಯನ್ನು ಬಾಗಲಕೋಟೆಯಲ್ಲಿ  ಕಾರ್ಯಕ್ರಮಕ್ಕೆ ಮಹಾರಾಷ್ಟ್ರದಿಂದ ಸೌಂಡ್ ಬಾಕ್ಸ್ ಗಳನ್ನು ಕರೆಸಿ ಚೌಡಯ್ಯನವರ ಮೂರ್ತಿಯನ್ನು ಹುಬ್ಬಳ್ಳಿಯಿಂದ ತಂದು ಜೊತೆಗೆ ಗಂಗಾ ಪುತ್ರ ಭೀಷ್ಮರ, ಗಂಗಾ ಮಾತೆಯ ಭಾವಚಿತ್ರ ಮತ್ತು  ಕುಂಭಗಳು ಆರತಿಗಳನ್ನು ಹೊತ್ತ ನಮ್ಮ ಸಮಾಜದ ತಾಯಂದಿರ ಜೊತೆ ಭವ್ಯವಾದ ಮೆರವಣಿಗೆಯೊಂದಿಗೆ ಶ್ರೀ ದಿಗಂಬರೇಶ್ವರ ಮಠದ ಸ್ವಾಮಿಗಳಿಂದ ಹಿರಿಯರೆಲ್ಲರೂ ಸೇರಿ  ಚಾಲನೆ ನೀಡಿ ಬಾಗಲಕೋಟೆಯ ಸಮಸ್ತ ಗುರು ಹಿರಿಯರು ಗಳೊಂದಿಗೆ ಅಂಬಿಗರ ಸಮಾಜದ ಸಮಸ್ತ ಯುವಕ ಬಾಂಧವರೆಲ್ಲ ಸೇರಿ ಶ್ರೀ ಬೀಳೂರಜ್ಜ ನ ಗುಡಿಯಿಂದ ಆರಂಭಗೊಂಡು  ಬಸವೇಶ್ವರ ಸರ್ಕಲ್ ದಿಂದ ಎಂಜಿ ರೋಡ್ ವಲ್ಲಭಾಯಿ ಚೌಕ್ ನಲ್ಲಿರುವ  ಅಂಬಿಗರ ಸಮಾಜದ ದೈವದ ಮನೆಯಲ್ಲಿ ಇರುವ ಶ್ರೀ ನಿಜ ಶರಣ ಚೌಡಯ್ಯ ನವರ ಮತ್ತು ಗಂಗಾಮಾತೆಯ  ಭಾವಚಿತ್ರಕ್ಕೆ ಹೂವಿನ ಹಾರವನ್ನು ಹಾಕಿ ಆರತಿ ಮಾಡುವುದರ ಜೊತೆಗೆ ರಾಜ್ಯ ಅಧ್ಯಕ್ಷರು, ಯುವ ಮುಖಂಡರು ಜಿಲ್ಲಾ ಪ್ರಧಾನ ಕಾರ್ಯದರ್ಶಿ, ನಗರ ಉಪಾಧ್ಯಕ್ಷ ಹಾಗೂ ಕಾರ್ಯದರ್ಶಿ ಸೇರಿ ಚೌಡಯ್ಯನವರ ಮೂರ್ತಿಗೆ ಪುಷ್ಪದ ಹಾರವನ್ನು ಹಾಕುವುದರ ಮೂಲಕ ವಂದಿಸಿದರು  ಬಸವೇಶ್ವರ ಬ್ಯಾಂಕ್  ಮಾರ್ಗದೊಂದಿಗೆ ಶಿರೂರ್ ಅಗಸಿ ಹತ್ತಿರ ಇರುವ ಮಿಲ್ ನಲ್ಲಿ ಸಮಸ್ತ ಅಂಬಿಗರ ಸಮಾಜದ ಬಾಂಧವರೆಲ್ಲ ಸೇರಿ ಪ್ರಸಾದ ಪಡೆದು ಮೆರವಣಿಗೆ ಕಾರ್ಯಕ್ರಮವನ್ನು ಮೊಟಕುಗೊಳಿಸಿದರು.



Post a Comment

Previous Post Next Post

Contact Form