Ilkal : ತಹಸೀಲ್ದಾರ್ ಕಚೇರಿಯಲ್ಲಿ ಮಹಾನ್ ತಪಸ್ವಿ ತತ್ವಜ್ಞಾನಿ ಶ್ರೀ ಮಹಾಯೋಗಿ ವೇಮನರ 613ನೇ ಜಯಂತೋತ್ಸವ ಆಚರಣೆ


 ಇಳಕಲ್ ತಹಸೀಲ್ದಾರ್ ಕಚೇರಿಯಲ್ಲಿ ಶ್ರೀ ಮಹಾಯೋಗಿ ವೇಮನರ ಜಯಂತಿ ಆಚರಣೆ... ಮಹಾನ್ ತಪಸ್ವಿ ತತ್ವಜ್ಞಾನಿ ಶ್ರೀ ಮಹಾಯೋಗಿ ವೇಮನರ 613ನೇ ಜಯಂತೋತ್ಸವವನ್ನು ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕ ಆಡಳಿತದ ವತಿಯಿಂದ ತಹಸೀಲ್ದಾರ್ ಕಚೇರಿಯಲ್ಲಿ ತಹಸಿಲ್ದಾರ ಸತೀಶ್ ಕೂಡಲಗಿ ಹಾಗೂ ಸಮಸ್ತ ರೆಡ್ಡಿ ಸಮಾಜ ಬಾಂಧವರ ಉಪಸ್ಥಿತಿಯಲ್ಲಿ ಜಯಂತೋತ್ಸವವನ್ನು ಆಚರಿಸಲಾಯಿತು. ಶ್ರೀ ಮಹಾಯೋಗಿ ವೇಮನ ರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪ ಸಮರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಮಸ್ತ ರೆಡ್ಡಿ ಸಮಾಜದ ಗುರು ಹಿರಿಯರು ಯುವ ಮಿತ್ರರು, ತಾಲೂಕ ಪಂಡಾಧಿಕಾರಿಗಳ ಕಚೇರಿಯ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು



Post a Comment

Previous Post Next Post

Contact Form