bagalkot : ಅಂಬಿಗರ ಸಮಾಜ ಹಾಗೂ ರಾಮಾರೂಡರ ಭಕ್ತವೃಂದದಿಂದ ಅದ್ದೂರಿ ಪಾದಯಾತ್ರೆ

 

CVGSUDDI

ಶ್ರೀ ಶ್ರೀ ಪರಮ ರಾಮಾರೂಡರ 62ನೇ ಪುಣ್ಯಾರಾಧನೆ ಹಾಗೂ ರಥೋತ್ಸವವನ್ನು ಕಾಕನೂರಿನಿಂದ ಸೂಳೆಕೇರಿ ನೀರಲಕೇರಿ ಶಿಕ್ಕೇರಿ ಮಾರ್ಗವಾಗಿ ಬಾಗಲಕೋಟೆಯಲ್ಲಿ ವಲ್ಲಭಾಯಿ ಚೌಕಿನಲ್ಲಿರುವ ಅಂಬಿಗರ ಚೌಡಯ್ಯನವರ ಮಠದಲ್ಲಿ ಪ್ರಸಾದ ಮಾಡಿ ಬೆಳಿಗ್ಗೆ ಅಂಬಿಗರ ಟೋಕರೆ ಕೋಳಿ ಸಮಾಜ ಮನೆಯ ದುರ್ಗವ್ವನ ಗುಡಿಯಿಂದ ಪಲ್ಲಕ್ಕಿಯ ಜೊತೆಗೆ ಬಾಗಲಕೋಟೆಯಿಂದ ವಿದ್ಯಾಗಿರಿ ಗದ್ದನಕೇರಿ ಮಾರ್ಗವಾಗಿ ತುಳಸಿಗೇರಿ ಹತ್ತಿರವಿರುವ ರಾಮಾರೂಡ ಮಠಕ್ಕೆ ಪಾದಯಾತ್ರೆ ಮೂಲಕ ಸಂಜೆ 5:00 ಗಂಟೆಗೆ ತಲುಪುತ್ತದೆ ಈ ಕಾರ್ಯಕ್ರಮಕ್ಕೆ ರಾಮಾರೂಢರ ಭಕ್ತರು ಪಲ್ಲಕ್ಕಿಯ ಜೊತೆ ಅಂಬಿಗರ ಸಮಾಜದ ಹೆಣ್ಣು ಮಕ್ಕಳು ಆರತಿಯೊಂದಿಗೆ ಕಾಲ್ನಡಿಗೆಯಲ್ಲಿ ಸಂತೋಷದಿಂದ ಉತ್ಸಾಹದಿಂದ ಹಿರಿಯರೆಲ್ಲರೂ ಸೇರಿ ಚಾಲನೆ ನೀಡಿ ರಾಮಾರೂಢ ಮಠಕ್ಕೆ ಸೇರುತ್ತಾರೆ ಜೊತೆಗೆ ಜಿಲ್ಲಾಧ್ಯಕ್ಷರು ಸಂಜೀವ್ ಡಿಗ್ಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ರಮೇಶ ಪಡಸಲಗಿ , ನಗರ ಅಧ್ಯಕ್ಷರು ಎಲ್ಲಪ್ಪ ಅಂಬಿಗೇರ್ ಉಪಾಧ್ಯಕ್ಷರು ಉಮೇಶ ಪಡಸಲಗಿ ಹಾಗೂ ಕಾರ್ಯದರ್ಶಿಗಳು ಗೋಪಾಲ್ ಕಟ್ಟಿಮನಿ, ಹಿರಿಯರು ಬಸಪ್ಪ ಮಾಗಿ ಮತ್ತು ಸಂಗಣ್ಣ ತಿಮ್ಮಣ್ಣವರ್, ಶಂಕರ್ ಸಗರ, ಮತ್ತು ಯುವಕರು ನಗರ ಆಡಳಿತ ಮಂಡಳಿ ಸೇರಿ ಸಮಸ್ತ ಅಂಬಿಗರ ಸಮಾಜದ ಬಾಂಧವರೆಲ್ಲ ಸೇರಿ ಮೆರವಣಿಗೆ ಕಾರ್ಯಕ್ರಮವನ್ನು ಪೂರ್ಣಗೊಳಿಸಿದರು

Post a Comment

Previous Post Next Post

Contact Form