ಗ್ರಾಮ ಆಡಳಿತ ಅಧಿಕಾರಿಗಳ ಸಂಘ ಇಳಕಲ್ಲ ತಾಲೂಕು ಘಟಕ ವತಿಯಿಂದ ಹಮ್ಮಿಕೊಂಡಿರುವ ಎರಡನೇ ಹಂತದ ಅನಿರ್ದಿಷ್ಟಾವಧಿ ಮುಷ್ಕರವು ತಹಶೀಲದಾರ ಕಚೇರಿ ಇಲಕಲ್ಲದ ಮುಂದೆ ನಡೆಯುತ್ತಿದ್ದು; ಸದರಿ ಮುಷ್ಕರಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಇಲಕಲ್ ತಾಲ್ಲೂಕ ಶಾಖೆಯ ವತಿಯಿಂದ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ತಮ್ಮ ಪದಾಧಿಕಾರಿಗಳೊಂದಿಗೆ ಮುಷ್ಕರದಲ್ಲಿ ಭಾಗವಹಿಸಿ ಮಾತನಾಡಿದ ತಾಲ್ಲೂಕ ಅಧ್ಯಕ್ಷರಾದ ಪರಶುರಾಮ ಎಸ್ ಪಮ್ಮಾರ , ಗ್ರಾಮ ಆಡಳಿತ ಅಧಿಕಾರಿಗಳದ್ದು ನ್ಯಾಯಯುತವಾದ ಬೇಡಿಕೆಗಳಾಗಿದ್ದು; ಸರ್ಕಾರವು ಮೂಲಭೂತ ಸೌಲಭ್ಯಗಳನ್ನು ನೀಡಿ ಕಾಲಮಿತಿಯಲ್ಲಿ ಕಾರ್ಯ ತಗೆದುಕೊಳ್ಳುವುದು ಬಿಟ್ಟು ,ಒತ್ತಡ ಹಾಕಿ ಕಾರ್ಯ ಮಾಡಿಸಿಕೊಳ್ಳುತ್ತಿದ್ದಾರೆ ಇದರಿಂದ ಮಾನಸಿಕವಾಗಿ ನೌಕರರ ಮೇಲೆ ಪರಿಣಾಮವಾಗುತ್ತಿದೆ ಕಾರಣ ಘನ ಸರ್ಕಾರ ಶೀಘ್ರವಾಗಿ ಎಲ್ಲಾ 23 ಸಮಸ್ಯೆಗಳನ್ನು ಈಡೇರಿಸಿ, ಸಾರ್ವಜನಿಕ ಸೇವೆಗೆ ಅನುವು ಮಾಡಿಕೊಡಬೇಕೆಂದು ವಿನಂತಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಪರಿಷತ್ ಸದಸ್ಯರಾದ ಈಶ್ವರ ಗಡ್ಡಿ,ಕಾರ್ಯದರ್ಶಿ ಎಸ್ ಜಿ ಬಂಗಾರಿ,ಗ್ರಾಮ ಆಡಳಿತ ಅಧಿಕಾರಿಗಳ ಸಂಘಧ ಅಧ್ಯಕ್ಷ ಎನ್ ಎ ಬೋರಗಿ, ಪದಾಧಿಕಾರಿಗಳಾದ ಬಸವರಾಜ ರೇವಡಿ,ಶಿವಪುತ್ರಪ್ಪ ಕತ್ತಿ,ಚಂದ್ರಶೇಖರ ಹಳದೂರ, ಲಿಂಗರಾಜ ಲೆಕ್ಕದ,ಮಹಾಂತೇಶ ಗೌಡರ,ಎಂ ಎಂ ಜಹಗೀರದಾರ, ಶ್ರೀಧರ ಜೋಗಿನ, ಮಹಾಂತೇಶ ಕಲ್ಮಠ ಹಾಗೂ ತಾಲೂಕಿನ ಸರ್ವ ಗ್ರಾಮ ಆಡಳಿತ ಅಧಿಕಾರಿಗಳು ಉಪಸ್ಥಿತರಿದ್ದರು.