ಇಳಕಲ್: ತಾಲೂಕಿನ ನಂದವಾಡಗಿ ಗ್ರಾಮದ ರಾಜ್ಯ ಹೆದ್ದಾರಿ ಎಸ್.ಎಚ್. -20 ರಾಯಚೂರ-ಬಾಚಿ ಕಿ.ಮಿ.125.80 ರಿಂದ 133.60 ಮತ್ತು ಕಿ.ಮಿ.156.10 ದಿಂದ ಕಿ.ಮಿ.165.80 ರ ವರೆಗೆ(ಆಯ್ದ ಭಾಗಗಳಲ್ಲಿ)
ರಸ್ತೆ ಸುಧಾರಣೆ ಕಾಮಗಾರಿ ಭೂಮಿ ಪೂಜೆಯನ್ನು ಬಾಗಲಕೋಟ ಸಂಸದ ಪಿ.ಸಿ.ಗದ್ದಿಗೌಡರ ಹಾಗೂ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಅಧ್ಯಕ್ಷ,ಶಿಕ್ಷಣ ಪ್ರೇಮಿ ಶಾಸಕ ವಿಜಯಾನಂದ ಎಸ್.ಕಾಶಪ್ಪನವರ ನೆರವೇರಿಸಿದರು.
2023-24 ಕೇಂದ್ರ ರಸ್ತೆ ಮೂಲ ಸೌಕರ್ಯ ನಿಧಿ ಅಡಿಯ
ಕಾಮಗಾರಿಗಳ ಅಂದಾಜು ಮೊತ್ತ 600 ಲಕ್ಷ ರೂ.ಮೊತ್ತವಾಗಿದೆ.ದಿನನಿತ್ಯದ ಬದುಕಿನಲ್ಲಿ ವ್ಯವಹಾರ,ವಹಿವಾಟು ಗಳು ಅಭಿವೃದ್ಧಿಗೊಳ್ಳಬೇಕೆಂದರೆ ರಸ್ತೆಗಳು ಚನ್ನಾಗಿರಬೇಕು ಎಂದು ಬಾಗಲಕೋಟ ಸಂಸದರಾದ ಪಿ.ಸಿ.ಗದ್ದಿಗೌಡರು ಭೂಮಿ ಪೂಜೆ ನೆರವೆರಿಸಿ ಮಾತನಾಡುತ್ತಾ
ಶಾಸಕ ವಿಜಯಾನಂದ ಕಾಶಪ್ಪನವರು ಈ ರಸ್ತೆಗಳನ್ನು 'ಸಿ.ಆರ್.ಎಫ್' ದಲ್ಲಿ ತೆಗೆದುಕೊಳ್ಳಬೇಕೆಂದು ಸರಕಾರಕ್ಕೆ ಮನವಿ ಮಾಡಿದಂತಹ ಸಂದರ್ಭದಲ್ಲಿ ತಾವು ಕೂಡಾ ಕೇಂದ್ರ ಸರಕಾರದಿಂದ ಈ ರಸ್ತೆ ಕಾಮಗಾರಿಯನ್ನ
ಕೆಂದ್ರ ಹಾಗೂ ರಾಜ್ಯ ಸರಕಾರದ ಅನುದಾನ ತಂದು ಇವತ್ತು ಕಾಮಗಾರಿ ಭೂಮಿ ಪೂಜೆ ನಡೆದಿದೆ.
ಕಾಮಗಾರಿ ಗುತ್ತಿಗೆದಾರ ಎಸ್.ಎಸ್.ಆಲೂರ ಅವರಿಗೆ ತಾವು ಮತ್ತು ಶಾಸಕರು ಹೇಳಿದಾಗೆ ರಸ್ತೆಕಾಮಗಾರಿಗಳು ಅಚ್ಚುಕಟ್ಟಾಗಿರಬೇಕು,ಏಕೆಂದರೆ ಕೆಲವೆ ದಿನಗಳಲ್ಲಿ ರಸ್ತೆ ಆಳಾಗದ ರೀತಿಯಲ್ಲಿ ನೋಡಿಕೊಳ್ಳಿ,ಜನರಿಂದ
ಯಾವುದೇ ತೆರನಾಗಿ ರಸ್ತೆಯ ಕಾಮಗಾರಿ ಕುರಿತು ದೂರುಗಳು ಬರದಂತೆ ನೋಡಿಕೊಳ್ಳಿ,ರಸ್ತೆಗಳನ್ನು ಮೇಲಿಂದ ಮೇಲೆ ಮಾಡುವುದಿಕ್ಕೆ ಆಗುವುದಿಲ್ಲ.
ಕಾಮಗಾರಿಯ ಅಧಿಕಾರಿ ಬಿರಾದರ ಅವರು ನಿಶ್ಚಿತವಾಗಿ ಗುಣಮಟ್ಟದ ಕೆಲಸಕಾರ್ಯಗಳನ್ನು ಮಾಡುತ್ತಾರೆ ಎಂದು ನುಡಿದಿದ್ದಾರೆ,ತಮ್ಮ ಹಾಗೂ ಶಾಸಕರ ಒತ್ತಡದಿಂದ ಈ ಕಾಮಗಾರಿ ಕೆಲಸವನ್ನು ತಂದಿದ್ದೇವೆ.ನೀವು ಸುಧೈವಿಗಳು ಹೈದರಬಾದ ದಿಂದ ಗೋವಾ ರಾಷ್ಟ್ರೀಯ ಹೆದ್ದಾರಿ ಕೆಲಸಗಳು ನಡೆಯುತ್ತಲಿವೆ,ಬರುವ ದಿನಮಾನಗಳಲ್ಲಿ ಹೈದರಾಬಾದ್ ಹಾಗೂ ಗೋವಾಕ್ಕೆ ಕಡಿಮೆ ಅವದಿಯಲ್ಲಿ ಚಲಿಸಲು "ಭಾರತ ಮಾಲಾ"ಮೂಲಕ ರಸ್ತೆ ಕಾಮಗಾರಿ ಯೋಜನೆ ಬೇಗ ಪ್ರಾರಂಭವಾಗುತ್ತದೆ.ಈ ಭಾಗದ ಜನರು ವ್ಯವಹಾರ,ವಹಿವಾಟಿನ ಮೂಲಕ ಆರ್ಥಿಕತೆಯಿಂದ ಸುಧಾರಣೆ ಕಾಣಬೇಕಾದರೆ ನಮ್ಮ ರಸ್ತೆಗಳು ಚನ್ನಾಗಿರುವುದರ ಜೊತೆಗೆ ಜನರ,ಶಾಸಕರ ಸಹಾಯ ಸಹಕಾರ ಅತಿ ಮುಖ್ಯವೆಂದು ಸಂಸದರು ಅಭಿವೃದ್ಧಿ ಕುರಿತು ಮಾತನಾಡಿದರು.
ಬಹುದಿನಗಳಿಂದ ಈ ರಸ್ತೆ ಕಾಮಗಾರಿ ಆಗಬೇಕೆನ್ನುವುದು ಈ ಭಾಗದ ಜನರ ಬೇಡಿಕೆಯ ಬೆನ್ನಲ್ಲೇ ಇಂದು ರಾಷ್ಟ್ರೀಯ ಹೆದ್ದಾರಿ ಬೆಳಗಾವಿ ಮಾರ್ಗದಿಂದ ರಾಯಚೂರ ವರೆಗೂ ಸಾಗುವ ರಸ್ತೆ ಬಹಳಷ್ಟು ಹದಗೆಟ್ಟು ಸಂಚಾರಕ್ಕೆ ಅಡೆತಡೆ ಯಾಗಿದ್ದು ಬೆಳಕಿಗೆ ಬಂದ ಕಾರಣ ತಾವು ರಾಜ್ಯ ಸರಕಾರಕ್ಕೆ ಮನವಿ ಮಾಡಿ ಕೊಳ್ಳುವುದ ಜೊತೆಗೆ ಕೆಂದ್ರ ಸರಕಾರದಿಂದ ಬಾಗಲಕೋಟ ಸಂಸದರಾದ ಪಿ.ಸಿ.ಗದ್ದಿಗೌಡರು ಕೂಡಾ ತಕ್ಷಣವೇ ಸರಕಾರದಿಂದ ಇವತ್ತು ಕಾಮಗಾರಿಗಳ ಅಂದಾಜು ಮೊತ್ತ 6.ಕೋಟಿಗಳ ವೆಚ್ಚದಲ್ಲಿ 8.50 ಕಿ.ಮಿ ಅಷ್ಟು ರಸ್ತೆ ಸುಧಾರ ಣೆ ಮಾಡುವುದಕ್ಕೆ ಫೆ 18 ರಂದು ನಂದವಾಡಗಿಯಲ್ಲಿ ಸಂಸದರ ಜೊತೆಗೆ ತಾವು ಕೂಡಾ ಸಂತೋಷ ದಿಂದ ಭೂಮಿ ಪೂಜೆಯನ್ನ ನೆರವೇರಿಸಿದ್ದೇವೆ.ಮಾನ್ಯ ಗದ್ದಿಗೌಡರ ಹೇಳಿದಾಗೆ ರಸ್ತೆಗಳು ಶುದ್ಧವಿದ್ದರೆ ಸುಗಮವಾಗಿ ಸಂಚಾರ ಮಾಡಬಹುದು ಅಷ್ಟೇ ಅಲ್ಲದೆ ರೈತರು,ವ್ಯಾಪಾರಸ್ಥರು,ಸಾರ್ವಜನಿಕರಿಗೆ ಅನುಕೂಲಕವಾಗಲೆಂದು ಕೆಂದ್ರ ಸರಕಾರ ಹಾಗೂ ರಾಜ್ಯ ಸರಕಾರದ ಅಡಿಯಲ್ಲಿ ಕಾಮಗಾರಿ ಚಾಲನೆ ನೀಡಲಾಗಿದೆ. ಕೆಂದ್ರ ಸರಕಾರದ 'ಭಾರತ ಮಾಲಾ' ಯೋಜನೆಯಲ್ಲಿ ಹೈದರಾಬಾದ ಹಾಗೂ ಗೋವಾಕ್ಕೆ ದೊಡ್ಡದಾದ ಯೋಜನೆ ಕಾಮಗಾರಿಗೆ ಚಾಲನೆಯನ್ನು ನೀಡಿದ್ದಾರೆ.
ಇನ್ನೂ ಕೆಲವೊಂದಿಷ್ಟು ಕಾಮಗಾರಿಗಳು ಬರುವ ದಿನಮಾನ ದಿನಗಳಲ್ಲಿ ಚಾಲನೆ ಕೊಡುವುದು ಬಾಕಿ ಇದೆ ಇದರ ಜೊತೆಗೆ ಸಂಸದರಿಗೆ ಸಾರ್ವಜನಿಕರ ಅಹವಾಲುಗಳನ್ನು ತಾವು ಶಾಸಕನಾಗಿ,ಒಬ್ಬ ಜನಪ್ರತಿನಿಧಿಯಾಗಿ ವಿನಂತಿಸಿಕೊಳ್ಳುವುದೆನೆಂದರೆ ತಾಲೂಕಿನ ಬಹುದಿನಗಳ ಬೇಡಿಕೆ "ರೈಲ್ವೆ ಮಾರ್ಗಕ್ಕೆ ಹುನಗುಂದ ಇಳಕಲ್ ಉಭಯತಾಲೂಕಿನ ಜನರು ಹೋರಾಟಮಾಡಿ ತಮಗೆ ಮನವಿಯನ್ನು ಸಲ್ಲಿಸಿದ್ದಾರೆ,ಸಮೀಪದ ಮುದ್ಗಲ್ ವರೆಗೂ ರೈಲ್ವೆ ಮಾರ್ಗಬಂದಿದೆ,
ನಮ್ಮ ನಂದವಾಡಗಿ ಯಿಂದ ಮುದಗಲಗೆ ಕೆವೆಲ 16 ಕಿ.ಮಿ.ಇದ್ದು ನಮ್ಮ ರಾಜ್ಯದ ಕೆಂದ್ರ ರೈಲ್ವೆ ಸಚಿವರಾದ ವಿ.ಸೋಮಣ್ಣ ಅವರಿಗೆ ತಾವು ಮನಸ್ಸು ಮಾಡಿದರ
ಮುದಗಲ ಮತ್ತು ಇಳಕಲ್ ಮಾರ್ಗದಿಂದ ಕುಡಚಿವರೆಗೂ ರೈಲ್ವೆ ಮಾಡಿಸಿಕೊಟ್ಟರೆ ನಮ್ಮ ಮತಕ್ಷೇತ್ರದ ಜನಗಳಿಗೆ ಅನುಕೂಲವಾಗುತ್ತದೆ.
ಈಗಾಗಲೇ ಆ ಯೋಜನೆ ಕೂಡಾ ಸಿದ್ಧವಾಗಿದೆ ಎಂದು ತಮಗೂ ಕೂಡಾ ತಿಳಿದಿದೆ,ಕೆಂದ್ರ ಸರಕಾರದ ಮೆಲೆ ಹೆಚ್ಚಿನ ಒತ್ತಡ ಹಾಕಿ ರೈಲ್ವೆ ಮಾರ್ಗ ತಂದು ಕೊಟ್ಟರೆ ತಮ್ಮ ಹೆಸರು ಇತಿಹಾಸ ಪುಟಗಳಲ್ಲಿ ಉಳಿಯುತ್ತದೆ ಎಂದು ಅಧ್ಯಕ್ಷೀಯ ನುಡಿಗಳನ್ನಾಡಿದ ಶಾಸಕ ವಿಜಯಾನಂದ್ ಕಾಶಪ್ಪನವರ ಇದೇ ಸಂದರ್ಭದಲ್ಲಿ ನಂದವಾಡಗಿಯ ಗ್ರಾಮದ ಹಿರಿಯರು, ಯುವಕರು,ಮಹಿಳೆಯರು ಉಪಸ್ಥಿತರಿದ್ದರು.