![]() |
CVGSUDDI |
ಈಗಿನ ವಿಧ್ಯಾರ್ಥಿಗಳಿಗೆ ಶಿಕ್ಷಣದ ಜೊತೆ ಜೀವನದ ಮೌಲ್ಯಗಳು ಹಾಗೂ ಒಳ್ಳೆಯ ಸಂಸ್ಕಾರವನ್ನು ಕೊಡುವಂತಾದಾಗ ಶಿಕ್ಷಣವನ್ನು ಅರ್ಥೈಸಿಕೊಂಡಂತೆ ಆಗುತ್ತದೆ ಮತ್ತು ಮಕ್ಕಳು ಉತ್ತಮ ಪ್ರಜೆಯಾಗುತ್ತಾರೆಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಸಂಜೀವಕುಮಾರ ಹಂಚಾಟೆ ಅವರು ಹೇಳಿದರು.
ಇಳಕಲ್ಲದ ಶಾಸಕರ ಸರಕಾರಿ ಮಾದರಿ ಪ್ರಾಥಮಿಕ (ಕಂಠಿಯವರ) ಶಾಲೆ 2024-25 ರ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿ ಅವರು ಹೇಳಿದರು.
ಇತಿಹಾಸದ ಮಹಾಪುರುಷರ ಕುರಿತು ಶಾಲೆಯಲ್ಲಿ ಮಕ್ಕಳಿಗೆ ಹೇಳಿದಾಗ ಅಸಾಧಾರಣ ಪ್ರತಿಭೆ ಹೊರಹೊಮ್ಮಲು ಸಾಧ್ಯವಾಗುತ್ತೆ ಅಂತಾ ಹೇಳುತ್ತಾ ತಮ್ಮ ಬಾಲ್ಯದ ದಿನಗಳನ್ನು ಕಂಠಿಯವರ ಶಾಲೆಯಲ್ಲಿ ಕಳೆದಿದ್ದನ್ನು ಸ್ಮರಿಸಿಕೊಂಡರು.
ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಶ್ರೀ ವಿಜಯಾನಂದ ಕಾಶಪ್ಪನವರು ಶಾಸಕರು ಹಾಗೂ ಅಧ್ಯಕ್ಷರು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ, ಬೆಂಗಳೂರು ಅವರು ಮಾತನಾಡಿ ಶಾಲೆಗೆ ಅವಶ್ಯಕವಿರುವ ಸೌಲಭ್ಯಗಳನ್ನು ಸರಕಾರದಿಂದಾಗಲಿ ಅಥವಾ ಶಾಸಕರ ನಿಧಿಯಿಂದಾಗಲಿ ಒದಗಿಸಿಕೊಟ್ಟು ದಿ. ಎಸ್ ಆರ್ ಕಂಠಿ ಅವರನ್ನು ಕನಸನ್ನು ನನಸಾಗಿಸಲು ಶ್ರಮಿಸುತ್ತೇನೆಂದು ಹೇಳಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಜಾಸ್ಮಿನ್ ಕಿಲ್ಲೇದಾರ ಅವರು ಕಂಠಿ ಅವರ ಶಾಲೆ ಯಾವುದೇ ಖಾಸಗಿ ಶಾಲೆಗಿಂತಲೂ ಕಡಿಮೆ ಇಲ್ಲ, ಇಲಾಖೆಯಿಂದ ಎಲ್ಲ ಸೌಲಭ್ಯಗಳನ್ನು ಹಾಗೂ ಸಹಕಾರವನ್ನು ನೀಡಲಾಗುವದು ಎಂದು ಹೇಳಿದರು.
ದಿವ್ಯ ಸಾನಿಧ್ಯವನ್ನು ವಹಿಸಿದ್ದ ಮ.ನಿ.ಪ್ರ ಶ್ರೀ ಗುರು ಮಹಾಂತ ಸ್ವಾಮಿಗಳವರು ಸರಕಾರಿ ಶಾಲೆಯ ಮಹತ್ವವನ್ನು ಉದಾಹರಣೆಗಳ ಸಹಿತವಾಗಿ ಹೇಳಿ ಅಪಾರ ಪ್ರತಿಭೆಯಿರುವ ಶಿಕ್ಷಕರ ಶೈಕ್ಷಣಿಕ ಅನುಭವವನ್ನು ಪಡೆಯಲು ಹೇಳಿದರು.
ಕಾರ್ಯಕ್ರಮದಲ್ಲಿ ನಗರಸಭೆಯ ಉಪಾಧ್ಯಕ್ಷರಾದ ಶ್ರೀಮತಿ ಕಾಳಮ್ಮ ಜಕ್ಕಾ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ರಾಘವೇಂದ್ರ ಚಿಂಚಮಿ, ನಗರಸಭೆಯ ಸದಸ್ಯರಾದ ಅಮೃತ ಬಿಜ್ಜಲ, ಕ್ಷೇತ್ರ ಸಮನ್ವಯಾಧಿಕಾರಿಗಳಾದ ಸಧಾಶಿವ ಗುಡಗುಂಟಿ, ಬಿ.ಆರ್.ಪಿ ವಿನೋದ ಭೋವಿ ಹಾಗೂ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಮಹಾಂತಪ್ಪ ಅಂಗಡಿಯವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಶಾಲಾ ಸುಧಾರಣೆ ಸಮಿತಿಯ ಉಪಾಧ್ಯಕ್ಷ ಪ್ರಶಾಂತ ಹಂಚಾಟೆ ಅವರು ಪ್ರಾಸ್ಥಾವಿಕ ಮಾತನಾಡಿ ಶಾಸಕರಿಗೆ ಶಾಲಾ ಅಭಿವೃದ್ಧಿಗೆ ಮನವಿ ಸಲ್ಲಿಸಿದರು. ಎಸ್.ಡಿ.ಎಮ್.ಸಿ. ಸರ್ವ ಸದಸ್ಯರು ಉಪಸ್ಥಿತಿರಿದ್ದರು.
ಮಕ್ಕಳಿಂದ ಮನರಂಜನಾ ಕಾರ್ಯಕ್ರಮ ನಡೆದವು.
ಸ್ವಾಗತವನ್ನು ಶ್ರೀಮತಿ ಮಸರಕಲ್ಲ ಅವರು ನಡೆಸಿಕೊಟ್ಟರು, ವಂದನಾರ್ಪಣೆಯನ್ನು ಮುಖ್ಯ ಗುರುಗಳಾದ ಬಿ.ಎಮ್ ಹೊರಗಿನಮಠ ಅವರು ನಡೆಸಿಕೊಟ್ಟರು, ನಿರೂಪಣೆಯನ್ನು ಶ್ರೀಮತಿ ನಿರೋಷಾ ಭೋವಿ ಹಾಗೂ ಬಂಡಿ ಅವರು ನಡೆಸಿದರು.