Kandagal : ಭಾರತದ ಭಕ್ತಿ ಸಂಪ್ರದಾಯಗಳನ್ನು ಬಿಂಬಿಸಲು ಕೀರ್ತನೆಗಳು ಅವಶ್ಯ : ನಂದವಾಡಗಿ,ಡಾ ಮಹಾಂತಲಿಂಗ ಶ್ರೀಗಳು

 


ಕೀರ್ತನೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿರುವ ನಂದವಾಡಗಿ ಡಾ ಮಹಾಂತಲಿಂಗ ಶಿವಾಚಾರ್ಯರು,ಶ್ರೀಮಠದ ಡಾ ಚನ್ನಮಲ್ಲ ಮಹಾಸ್ವಾಮಿಗಳು ಹಾಗೂ ಗ್ರಾಮ ಪ ಮಾಜಿ ಅಧ್ಯಕ್ಷ ಮಹಮ್ಮದಸಾಬ ಭಾವಿಕಟ್ಟಿ, ಕೀರ್ತನೆಕಾರ ಶರಣಬಸವ ಶಾಸ್ತ್ರೀಗಳು ಮನ್ನೆರಾಳ .


ಕಂದಗಲ್ಲ : ಕೀರ್ತನೆಗಳು ಭಾರತದ ಭಕ್ತಿ ಸಂಪ್ರದಾಯಗಳನ್ನು ಬಿಂಬಿಸಲು ಅವಶ್ಯವಾಗಿದ್ದು ಪ್ರತಿಯೊಬ್ಬರಲ್ಲಿಯೂ ಭಕ್ತಿ ನಿಷ್ಠೆ ಪ್ರಾಮಾಣಿಕತೆ ಜೊತೆಗೆ ಶರಣರ ಸಂತರ ದೇವನುದೇವತೆಗಳ ಚರಿತ್ರೆ ಈ ಕೀರ್ತನೆಗಳಲ್ಲಿದ್ದು ಎಲ್ಲರೂ ತಿಳಿದುಕೊಂಡು ಸನ್ಮಾರ್ಗದಲ್ಲಿ ಮುಂದುವರಿಯಬೇಕು ಎಂದು ಗ್ರಾಮದ ಸುವರ್ಣಗಿರಿ ಶ್ರೀ ರುದ್ರುಸ್ವಾಮಿ ಮಠದಲ್ಲಿ ನೆಡೆದ 50 ನೆ ಮಾಸಿಕ ಶಿವಾನುಭವ 

ಕಾರ್ಯಕ್ರಮದಲ್ಲಿ ನಂದವಾಡಗಿ ಮಹಾಂತೇಶ್ವರ ಮಠದ ಹಿರಿಯ ಶ್ರೀಗಳಾದ ಡಾ ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಕಾರ್ಯಕ್ರಮ ನೇತೃತ್ವ ವಹಿಸಿ ಮಾತನಾಡಿದ ಕಂದಗಲ್ಲ ಸುವರ್ಣಗಿರಿ ರುದ್ರುಸ್ವಾಮಿ ಮಠದ ಡಾ ಮ ನಿ ಪ್ರ ಚನ್ನಮಲ್ಲ ಮಹಾಹಾಸ್ವಾಮಿಗಳು ಕೀರ್ತನೆಗಳು ಮಹಾನುಭಾವರ ಸ್ಮರಣೆ ಮೂಲಕ ನಮ್ಮ ಜೀವನಕ್ಕೆ ಅಮೂಲ್ಯವಾದ ಕೊಡುಗೆ ನೀಡಿದ್ದು ಇದರಿಂದ ನಾವು ಸಾಕಷ್ಟು ತಿಳಿದುಕೊಳ್ಳಬಹುದು. ನಮ್ಮ ಸಂಪೂರ್ಣ ಜೀವನ ಭಕ್ತಿಯಲ್ಲಿ ತೆಲಾಡುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಆಶೀರ್ವಚನ ನೀಡಿದರು.ವೇದಮೂರ್ತಿ ಶರಣಬಸವ ಶಾಸ್ತ್ರೀಗಳು ಮನ್ನೆರಾಳ, ಗದಗರವರು ಕೀರ್ತನೆ ಹೇಳಿದರು.



ಗ್ರಾಮ ಪ ಮಾಜಿ ಅಧ್ಯಕ್ಷರಾದ ಮಹಮ್ಮದಾಸಬ್ ಭಾವಿಕಟ್ಟಿ ಮುಖ್ಯ ಅತಿಥಿ ಸ್ಥಾನ ಅಲಂಕರಿಸಿ ಎಲ್ಲರನ್ನು ಸ್ವಾಗತಿಸಿದರು ಹಾಗೂ ಆಗಮಿಸಿದ ಎಲ್ಲ ಭಕ್ತರಿಗೆ ಪ್ರಸಾದ ಸೇವೆ ಕಲ್ಪಿಸಿದರು.ಗೀತಾ ಭೋವಿ ಪ್ರಾರ್ಥಿಸಿದರು. ಕವಿತಾ ಹವಾಲ್ದಾರಾಮಠ ನಿರೂಪಿಸಿದರು . ವಿಜಯಲಕ್ಷ್ಮಿ ಹಡಪದ ವಂದಿಸಿದರು ಕಾರ್ಯಕ್ರಮದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಮಹಿಳೆಯರು ಕಂದಗಲ್ಲ ಮತ್ತು ಸುತ್ತಮುತ್ತಲಿನ ಗ್ರಾಮದ ಹಿರಿಯರು ಮಕ್ಕಳು ಭಾಗವಹಿಸಿದ್ದರು 

Post a Comment

Previous Post Next Post

Contact Form