ಅಮೀನಗಡ ನಗರ ಪಟ್ಟಣ ಪಂಚಾಯಿತಿಗೆ ಸಂಬಂಧಿಸಿದಂತೆ 1998 ರಿಂದ 2025ರ ವರೆಗೂ ಭೂ ಪರಿವರ್ತನೆ ಆದ ಜಾಗಗಳಲ್ಲಿ ಅಂಕಿ ಸಂಖ್ಯೆಗಳ ಪ್ರಕಾರ ಇರಬೇಕಾದ ಜಾಗಗಳಲ್ಲಿ ಕೆಲವೇ ಕೆಲವು ಸಾರ್ವಜನಿಕ ಉದ್ಯಾನವನಗಳು ಇದ್ದು ಇನ್ನುಳಿದ ಸಾರ್ವಜನಿಕ ಉದ್ಯಾನವನಗಳು ಕಣ್ಮರೆಯಾಗಿವೆ, ಪ್ರತಿ ಎನ್, ಏ ಪ್ಲಾಟಗಳನ್ನು ಮಾಡಿದಾಗ ಅಲ್ಲಿ ಸಾರ್ವಜನಿಕ ಉದ್ಯಾನವನಗಳು ನಿರ್ಮಿಸಲೆಂದೆ ಸ್ಥಳವನ್ನು ನಿಗದಿ ಪಡಿಸಿ ಅವುಗಳನ್ನು ಅಭಿವೃದ್ಧಿ ಪಡಿಸಬೇಕು ಮತ್ತು ಆ ಉದ್ಯಾನವನಗಳು ಆ ಪ್ರದೇಶದಲ್ಲಿ ಇರುವ ಜನರಿಗೆ ಬೆಳಿಗ್ಗೆ ಸಾಯಂಕಾಲ ವಿಹಾರಕ್ಕೆಂದು, ವಿಶ್ರಾಂತಿಗೆಂದು, ಚಿಕ್ಕ ಮಕ್ಕಳಿಗೆ ಅಡಲು ಇರಬೇಕಾದ ಆಟಿಕೆಗಳು ಇರಬೇಕು, ಅವೆಲ್ಲವೂ ಇರದೆ ಇರುವುದು ಬೇಸರದ ಸಂಗತಿ, ಇವೆಲ್ಲವನ್ನೂ ಮೀರಿ ಅಮೀನಗಡ ಪಟ್ಟಣ ಪಂಚಾಯತಿಯ ನಗರದಲ್ಲಿ ಸಾರ್ವಜನಿಕ ಉದ್ಯಾನವನಗಳು ಕೇವಲ ದಾಖಲೆಯಲ್ಲಿ ಉಲ್ಲೆಕೆಗಳಿದ್ದು ಮತ್ತು ಅವುಗಳಲ್ಲಿ ಕೆಲವೊಂದಿಷ್ಟು ಪ್ರಭಾವಶಾಲಿ ವ್ಯಕ್ತಿಗಳ ಪಾಲಾಗಿವೆ ಈ ಕೂಡಲೇ ಅಮೀನಗಡ ನಗರ ಪಟ್ಟಣ ಪಂಚಾಯತಿಯ ಭೂ ಪರಿವರ್ತನ ಮಾಡಿದ ಜಾಗಗಳಲ್ಲಿ ಕಣ್ಮರೆಯಾಗಿರುವ ಆ ಎಲ್ಲಾ ಸಾರ್ವಜನಿಕ ಉದ್ಯಾನವನಗಳನ್ನು ಅಭಿವೃದ್ಧಿ ಪಡಿಸಬೇಕು ಹಾಗೂ ಅಮೀನಗಡ ಪಟ್ಟಣ ಪಂಚಾಯಿತಿಯಲ್ಲಿ ಗ್ರಾಮ ಪಂಚಾಯಿತಿ ಅವಧಿಯಿಂದ ಇಲ್ಲಿಯವರೆಗೆ ವಸತಿ ಉದ್ದೇಶಕ್ಕಾಗಿ ಭೂಪರಿವರ್ತನೆಗಳಾದ ಲೆಔಟ್ ಗಳಲ್ಲಿ ಉದ್ಯಾನವನ ಮತ್ತು ನಾಗರೀಕ ಸೌಲಭ್ಯಕ್ಕಾಗಿ ಕಾಯ್ದಿರಿಸಿದ ಜಾಗೆಗಳನ್ನು ಯಥಾ ಪ್ರಕಾರ ಕಾಯ್ದುಕೊಂಡು ಹೋಗಬೇಕು ಹಾಗೂ ಅಭಿವೃದ್ಧಿ ಪಡಿಸಬೇಕು, ಅಭಿವೃದ್ಧಿ ಪಡಿಸದೆ ಇದ್ದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯು ಧರಣಿ ಸತ್ಯಾಗ್ರಹವನ್ನು ಮುಂದಿನ ದಿನಮಾನಗಳಲ್ಲಿ ಮಾಡಲಾಗುವುದು ಎಂದು ಹೇಳಿದರು
ಈ ಸಂದರ್ಭದಲ್ಲಿ ಕರವೇ ಜಿಲ್ಲಾ ಅಧ್ಯಕ್ಷರಾದ ಬಸವರಾಜ ಧರ್ಮಂತಿ, ಹುನಗುಂದ ಮತಕ್ಷೇತ್ರದ ಕರವೇ ಅಧ್ಯಕ್ಷರಾದ ರಮಜಾನ್ ನದಾಫ್,ಹುನಗುಂದ ತಾಲೂಕು ಕರವೇ ಅಧ್ಯಕ್ಷರಾದ ರೋಹಿತ್ ಬಾರಕೇರ,ಇಲಕಲ್ಲ ತಾಲೂಕು ಕರವೇ ಅಧ್ಯಕ್ಷರಾದ ಮಹಾಂತೇಶಗೌಡ ವಂಕಲಕುಂಟಿ,ಇಲಕಲ್ಲ ನಗರ ಘಟಕದ ಕರವೇ ಅಧ್ಯಕ್ಷರಾದ ಅಶೋಕ ಪೂಜಾರಿ,ಬಾಗಲಕೋಟ ಜಿಲ್ಲಾ ಪ್ರ ಕಾರ್ಯದರ್ಶಿ ಸಂಗಮೇತ ಅಂಬಿಗೇರ ಅವರು ಮತ್ತು ಇನ್ನಿತರ ಕರವೇ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು